ಕರ್ನಾಟಕ

karnataka

ETV Bharat / bharat

ಮದುವೆ ನಿರಾಕರಿಸಿದ ಅಪ್ರಾಪ್ತೆ ಮೇಲೆ ಹಲ್ಲೆ...ಯುವಕನ ಬಂಧನ - ಕಾಮತ್​ಗಹರ್​-ಫೆನೆ ಪ್ರದೇಶ

14 ವರ್ಷದ ಅಪ್ರಾಪ್ತೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮಹಾರಾಷ್ಟ್ರದ ಭಿವಾಂಡಿ ಪಟ್ಟಣದ ಯುವಕನನ್ನ ಗುರುವಾರ ಬಂಧಿಸಲಾಗಿದೆ.

Youth arrested for attacking girl
ಮದುವೆ ನಿರಾಕರಿಸಿದ ಅಪ್ರಾಪ್ತೆ ಮೇಲೆ ಹಲ್ಲೆ...ಯುವಕನ ಬಂಧನ

By

Published : Apr 24, 2020, 8:20 AM IST

ಮಹಾರಾಷ್ಟ್ರ/ಥಾಣೆ:ಮದುವೆಯಾಗಲು ನಿರಾಕರಿಸಿದ 14 ವರ್ಷದ ಅಪ್ರಾಪ್ತೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮಹಾರಾಷ್ಟ್ರದ ಭಿವಾಂಡಿ ಪಟ್ಟಣದ ಯುವಕನನ್ನ ಗುರುವಾರ ಬಂಧಿಸಲಾಗಿದೆ.

ಆರೋಪಿ ಮತ್ತು ಸಂತ್ರಸ್ತೆ ಕಾಮತ್​ಗಹರ್​-ಫೆನೆ ಪ್ರದೇಶದ ವಾಸಿಸುತ್ತಿದ್ದು, ಆರೋಪಿ ಕಳೆದ ಒಂದು ವರ್ಷದಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಆದರೆ ಆಕೆ ಅವನ ಪ್ರೇಮ ನಿವೇದನೆ ತಿರಸ್ಕರಿಸಿದಳು. ಹೀಗಾಗಿ ಮಂಗಳವಾರ ಸಂಜೆ ಆಕೆಯ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿ,ತೀವ್ರವಾಗಿ ಗಾಯಗೊಳಿಸಿದ್ದಾನೆ. ಬಳಿಕ ತನ್ನ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡಿದ್ದು,ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುರುವಾರ ಆರೋಪಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು,ಪೊಲೀಸರು ಕೊಲೆ ಯತ್ನ ಆರೋಪದ ಅಡಿ ಬಂಧಿಸಿಲಾಗಿದೆ ಎಂದು ಭಿವಾಂಡಿ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ವಿ.ಕಾಂಬ್ಳೆ ತಿಳಿಸಿದ್ದಾರೆ.

ABOUT THE AUTHOR

...view details