ನಾಗ್ಪುರ : ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡಿದ್ದ ಇಬ್ಬರು ಯುವತಿಯರು ವೇಶ್ಯಾವಾಟಿಕೆ ಜಾಲಕ್ಕೆ ಬಿದ್ದ ಆಘಾತಕಾರಿ ಘಟನೆಯೊಂದು ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.
ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡು ವೇಶ್ಯಾವಟಿಕೆ ಜಾಲಕ್ಕೆ ಬಿದ್ದ ಯುವತಿಯರು..! - ವೇಶ್ಯಾವಟಿಕೆ ಜಾಲಕ್ಕೆ ಬಿದ್ದ ಯುವತಿಯರ ರಕ್ಷಣೆ
ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡಿದ್ದ ಇಬ್ಬರು ಯುವತಿಯರು ವೇಶ್ಯಾವಟಿಕೆ ಜಾಲಕ್ಕೆ ಬಿದ್ದ ಆಘಾತಕಾರಿ ವಿಚಾರ ನಾಗ್ಪುರದಿಂದ ವರದಿಯಾಗಿದೆ. ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಯುವತಿಯರನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಕೊರಾಡಿ ರಸ್ತೆಯ ವಿಜಯಾನಂದ ಕಾಲೊನಿಯಲ್ಲಿ ಭಾಗಶಃ ನಿರ್ಮಾಣಗೊಂಡಿದ್ದ ಮನೆಯಲ್ಲಿ ಚಂದ್ರಶೇಖರ್ ಮೊದಲಿಯಾರ್ ಎಂಬಾತ ಕೆಲಸವಿಲ್ಲದೇ ಮನೆಯಲ್ಲಿದ್ದ ಹುಡುಗಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಬ್ರೋಕರ್‌ನ್ನು ಸಂಪರ್ಕಿಸಿ ಸ್ಥಳದ ಬಗ್ಗೆ ಮಾಹಿತಿ ಪಡೆದು ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ, ಆರೋಪಿ ಚಂದ್ರಶೇಖರ್ ಮೊದಲಿಯಾರ್ನನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಲಾಕ್ಡೌನ್ಗೂ ಮುನ್ನ ಈ ಇಬ್ಬರು ಯುವತಿಯರು ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಒಬ್ಬಳು ಗುಜರಾತ್‌ನ ರಾಜ್‌ಕೋಟ್‌ನ ಸೀರೆ ಕಾರ್ಖಾನೆಯಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬಳು ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಮಾರ್ಚ್‌ನಲ್ಲಿ ಲಾಕ್ಡೌನ್ ಘೋಷಣೆಯಾದ ಬಳಿಕ ಡಿಸೈನರ್ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಕಳೆದುಕೊಂಡು ಮನೆ ಮರಳಿದ್ದಳು. ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ವಿಭಾಗದಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಇನ್ನೊಬ್ಬಳು ಯುವತಿ ಕೂಡ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದಳು. ಕೆಲಸ ಕಳೆದುಕೊಂಡು ಜೀವನ ನಡೆಸಲು ಬೇರೆ ದಾರಿಯಿಲ್ಲದೇ ಹೆಣಗಾಡುತ್ತಿದ್ದ ಯುವತಿಯರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸುವ ಆಮಿಷವೊಡ್ಡಿ ಆರೋಪಿ ಮೊದಲಿಯಾರ್ ವೇಶ್ಯಾವಟಿಕೆ್ಗೆ ತಳ್ಳಿದ್ದ. ಆರೋಪಿ ಮೊದಲಿಯಾರ್ ಗ್ರಾಹಕರಿಂದ ಹೆಚ್ಚು ಹಣ ಪಡೆದು ಯುವತಿಯರಿಗೆ ಕಡಿಮೆ ಮೊತ್ತ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.