ಹೈದರಾಬಾದ್: ಸ್ನಾನ ಮಾಡುತ್ತಿರುವ ಯುವತಿಯ ವಿಡಿಯೋವನ್ನ ಪಕ್ಕದ ಮನೆಯ ಯುವಕ ತೆಗೆಯಲು ಯತ್ನಿಸಿರುವ ಘಟನೆ ಇಲ್ಲಿನ ಜೂಬ್ಲಿಹಿಲ್ಸ್ನಲ್ಲಿ ನಡೆದಿದೆ.
ಯುವತಿ ಸ್ನಾನ ಮಾಡುತ್ತಿರುವ ವಿಡಿಯೋ ತೆಗೆದ... ಮುಂದೇನಾಯ್ತು !? - ಹೈದರಾಬಾದ್ ಅಪರಾಧ ಸುದ್ದಿ
ಬಾತ್ರೂಂನಲ್ಲಿ ಸ್ನಾನ ಮಾಡಲು ತೆರಳಿದ ಯುವತಿಯೊಬ್ಬಳ ವಿಡಿಯೋವನ್ನು ಪಕ್ಕದ ಮನೆ ಯುವಕನೊಬ್ಬ ತೆಗೆಯಲು ಯತ್ನಿಸಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಯೂಸುಫ್ ಫಾರೂಕ್ (19) ಪಕ್ಕದ ಮನೆಯಲ್ಲಿ ಕೆಲ ಯುವತಿಯರು ವಾಸಿಸುತ್ತಿರುವುದನ್ನ ನೋಡಿದ್ದ. ಮಂಗಳವಾರ ಯುವತಿಯೊಬ್ಬಳು ಸ್ನಾನ ಮಾಡುತ್ತಿರುವಾಗ ಕಿಟಿಕಿಯಿಂದ ವಿಡಿಯೋ ತೆಗೆಯಲು ಯತ್ನಿಸಿದ್ದಾನೆ.
ಫಾರೂಕ್ ವಿಡಿಯೋ ಚಿತ್ರಿಕರಿಸುತ್ತಿರುವುದು ಯುವತಿಯ ಗಮನಕ್ಕೆ ಬಂದಿದೆ. ಈ ಬಗ್ಗೆ 100ಗೆ ಕರೆ ಮಾಡಿ, ಆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ಸ್ವೀಕರಿಸಿದ ಬಂಜಾರ ಹಿಲ್ಸ್ ಪೊಲೀಸರು ನಾಲ್ಕೇ ನಿಮಿಷದಲ್ಲಿ ಸ್ಥಳಕ್ಕೆ ದೌಡಾಯಿಸಿ ಫಾರೂಕ್ನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.