ಕರ್ನಾಟಕ

karnataka

ETV Bharat / bharat

ಆನ್‌ಲೈನ್ ವಂಚನೆ: ಸ್ಮಾರ್ಟ್ ಫೋನ್ ಬದಲಿಗೆ ಬಂದಿದ್ದು ಮಾತ್ರ ಮೂರು ಪ್ಯಾಕೆಟ್ ಬಿಸ್ಕೆಟ್!

ಆನ್‌ಲೈನ್ ಶಾಪಿಂಗ್ ನಲ್ಲಿ ಸ್ಮಾರ್ಟ್ ಫೋನ್ ಬದಲಿಗೆ ಮೂರು ಪ್ಯಾಕೆಟ್ ಬಿಸ್ಕೆಟ್ ಪಾರ್ಸಲ್ ಮಾಡಿ, ಗ್ರಾಹಕರೊಬ್ಬರಿಗೆ ಪಂಗನಾಮ ಹಾಕಿರುವ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ.

Online fraud
Online fraud

By

Published : Oct 9, 2020, 12:02 PM IST

ಯಮುನಾನಗರ್: ಹರಿಯಾಣದ ಕೋಟ್ ಕಲ್ಸಿಯಾ ಮೂಲದ ವ್ಯಕ್ತಿಯೊಬ್ಬರು ಇ-ಕಾಮರ್ಸ್ ಸೈಟ್ ನಲ್ಲಿ ಸ್ಮಾರ್ಟ್ ಫೋನ್ ಬುಕ್ ಮಾಡಿದ್ದರು. ಆದರೆ ಫೋನ್​ ಬದಲಿಗೆ ಮೂರು ಪ್ಯಾಕೆಟ್ ಬಿಸ್ಕೆಟ್ ಪಾರ್ಸಲ್ ಮಾಡಿ, ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಹರ್​ಪ್ರೀತ್​ ಸಿಂಗ್ ಮೋಸ ಹೋಗಿರುವ ವ್ಯಕ್ತಿ. ನಾನು ಆನ್‌ಲೈನ್‌ ಶಾಪಿಂಗ್ ವೆಬ್‌ಸೈಟ್‌ನಿಂದ 11,000 ರೂ. ಮೊಬೈಲ್ ಬುಕ್ ಮಾಡಿದ್ದೆ. 2 ದಿನಗಳ ನಂತರ ಪಾರ್ಸಲ್ ಸಿಕ್ಕಿತ್ತು‌. ಆದರೆ ಪಾರ್ಸಲ್ ಬಾಕ್ಸ್ ತೆರೆದಾಗ ಫೋನ್ ಬದಲಿಗೆ ಮೂರು ಪ್ಯಾಕೆಟ್ ಬಿಸ್ಕೆಟ್ ಇದ್ದವು. ತಕ್ಷಣ ಆನ್‌ಲೈನ್ ವೆಬ್‌ಸೈಟ್‌ನ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿದೆ, ಆದ್ರೆ ಯಾವುದೇ ತೃಪ್ತಿದಾಯಕ ಉತ್ತರ ಸಿಗಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸಂಬಂಧಿತ ವೆಬ್‌ಸೈಟ್‌ನಿಂದ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details