ಪಥನಮತಟ್ಟ( ಕೇರಳ): ಜಿಲ್ಲೆಯ ಕುಡ್ಡಪ್ಪನ ಚಿತ್ತಾರ್ ಪ್ರದೇಶದ ಬಾವಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಬಾವಿಗೆ ಬಿದ್ದು ಯುವಕ ಸಾವು - Young man found dead in a well in Kerala
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಕೇರಳದ ಚಿತ್ತಾರ್ ಅರಣ್ಯ ಇಲಾಖೆ ಕಚೇರಿ ಬಳಿ ನಡೆದಿದೆ.
ಬಾವಿಗೆ ಬಿದ್ದು ಯುವಕ ಸಾವು
ಮೃತ ಯುವಕನನ್ನು ವರ್ಗೀಸ್ ಎಂದು ಗುರುತಿಸಲಾಗಿದೆ. ಕ್ಯಾಮರಾ ಒಡೆದು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ತಾರ್ ಅರಣ್ಯ ಇಲಾಖೆ ಕೇಂದ್ರ ಕಚೇರಿ ಬಳಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದರು.
ಈ ವೇಳೆ ಈತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆಯ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.