ನಲ್ಗೊಂಡ:ಆ ಯುವಕ ಮಹಿಳೆಗೆ ದಿನನಿತ್ಯ ಕಾಟ ಕೊಡುತ್ತಿದ್ದ. ಇದರಿಂದ ಬೇಸತ್ತ ಆ ಮಹಿಳೆ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಕಟ್ಟಿಗೆಯಿಂದ ಥಳಿಸಿರುವ ಘಟನೆ ನಲ್ಗೊಂಡದಲ್ಲಿ ನಡೆದಿದೆ.
ಕಾಟ ಕೊಟ್ಟ ಪೋಕರಿಗೆ ಬಿದ್ವು ಆಂಟಿಯಿಂದ ಧರ್ಮದೇಟು ಇಲ್ಲಿನ ಆರ್ಜಾಲಬಾವಿಯ ಮಹಿಳೆಯೊಂದಿಗೆ ಅದೇ ನಗರದ ಯುವಕ ಶ್ರೀಶೈಲ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಈ ವಿಷಯವನ್ನು ಮಹಿಳೆ ಆತನ ಗಂಡನಿಗೆ ತಿಳಿಸಿದ್ದಾಳೆ. ಕೂಡಲೇ ಗಂಡ-ಹೆಂಡ್ತಿ ಶ್ರೀಶೈಲನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಇನ್ನು ಕಂಬಕ್ಕೆ ಕಟ್ಟಿ ಹಾಕಿದ್ದ ಶ್ರೀಶೈಲನನ್ನು ಆ ಮಹಿಳೆ ಮನಬಂದಂತೆ ಕಟ್ಟಿಗೆಯಿಂದ ಥಳಿಸಿದ್ದಾಳೆ. ಈ ಸುದ್ದಿ ತಿಳಿದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶ್ರೀಶೈಲನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆದ್ರೆ ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಧೈರ್ಯ ತೋರಿ ಯುವಕನಿಗೆ ಥಳಿಸಿದ ಮಹಿಳೆಗೆ ಭೇಷ್ ಎನ್ನುತ್ತಿದ್ದಾರೆ.