ಆಂಧ್ರಪ್ರದೇಶ:ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಸೆಲ್ಫೋನ್,ಗೇಮ್ಸ್, ಹಾಡುವುದು, ನೃತ್ಯ ಕಲಿಯುವುದು ಇದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ, ಇಲ್ಲೊಬ್ಬ ಪೋರಿ ವಿಶೇಷವಾಗಿ ಶ್ಲೋಕ, ಮಹಾಕಾವ್ಯಗಳನ್ನು ಓದುವುದು, ಯೋಗಾಸನ ಮಾಡುವುದರಲ್ಲಿ ಹೆಚ್ಚಿನ ಒಲವು ಹೊಂದಿರುವುದು ವಿಶೇಷವಾಗಿದೆ.
ಅಪರೂಪದ ಕೌಶಲ್ಯಗಳನ್ನು ಹೊಂದಿರುವ ಬಾಲಕಿ ವಿಜಯನಗರಂ ಜಿಲ್ಲೆಯ ವಿಜಿನಗಿರಿ ಮೂಲದ ಶ್ರಿನಿವಾಸ್ ಮತ್ತು ಅರುಣಾ ಎಂಬುವವರ ಪುತ್ರಿ ಗೌರಿ ಅಪರೂಪ ಪ್ರತಿಭೆಯನ್ನು ಹೊಂದಿರುವ ಬಾಲಕಿ. ಈ ಮೇಲಿನ ವಿಷಯಗಳಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ಏಳು ವರ್ಷದ ಪೋರಿ, ರಾಮಾಯಣ ಮತ್ತು ಭಗವದ್ಗೀತೆಗಳಲ್ಲಿರುವ ಕಠಿಣವಾದ ಶ್ಲೋಕಗಳನ್ನು ಸುಲಭವಾಗಿ ಓದುತ್ತಾಳೆ. ಅಷ್ಟೇ ಅಲ್ಲದೇ ಯೋಗಾಸನದಲ್ಲೂ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾಳೆ ಈ ಬಾಲಕಿ.
ರಾಮಾಯಣ ಮತ್ತು ಭಗವದ್ಗೀತೆ ಓದುತ್ತಿರುವ ಗೌರಿ ಬಾಲಕಿಯೂ 3ನೇ ತರಗತಿಯಿಂದಲೆ ಶ್ಲೋಕಗಳನ್ನು ಕಲಿಯಲು ಆರಂಭಿಸಿದ್ದು, ಅದರಲ್ಲಿ ಕೌಶಲ್ಯವನ್ನು ಹೊಂದಿದ್ದಾಳೆ. ತೆಲಗು ಭಾಷೆ ಹೊರತಾಗಿ ಗೌರಿ, ಇಂಗ್ಲಿಷ್ ಭಾಷೆಯಲ್ಲೂ ಹೆಚ್ಚಿನ ಜ್ಞಾನ ಪಡೆದುಕೊಂಡಿದ್ದಾಳೆ.
ಯೋಗಾಸನದಲ್ಲಿ ಎತ್ತಿದ ಕೈ ಗೌರಿ ಗೌರಿಯ ತಂದೆ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ತಾಯಿ ಶಾಸಗಿ ಶಾಲೆ ಶಿಕ್ಷಕರಿದ್ದಾರೆ. ಗೌರಿಗೆ ಪೋಷಕರೇ ಯೋಗ ತರಬೇತಿಯನ್ನು ನೀಡುತ್ತಿದ್ದು, ಯಾವುದೇ ಆಸನಗಳನ್ನು ಸುಲಭವಾಗಿ ಮಾಡುತ್ತಾಳೆ. ಮಗಳ ಸಾಧನೆಗೆ ತಂದೆ-ತಾಯಿ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದು, ಮಗಳು ಇದರಲ್ಲಿ ಸಾಧನೆ ಮಾಡಬೇಕೆಂದು ಆಸೆಯನ್ನು ಹೊಂದಿದ್ದಾರೆ.
ಈ ಪುಟ್ಟ ಪೋರಿ ತನ್ನ ಅಪರೂಪದ ಪ್ರತಿಭೆ ಮತ್ತು ಕೌಲಶ್ಯಗಳಿಂದ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾಳೆ.
ಯೋಗಾಸನದಲ್ಲಿ ಎತ್ತಿದ ಕೈ ಗೌರಿ