ನವದೆಹಲಿ:ಖಿನ್ನತೆಯಿಂದ ಬಳಲುತ್ತಿರುವವರು ಮಾನಸಿಕ ಆರೋಗ್ಯ ಸ್ಥಿತಿಯಿಂದ ಹೊರಬರುವುದು ಅಷ್ಟು ಸುಲಭವಲ್ಲ ಎಂದು ನಟಿ ದೀಪಿಕಾ ಪಡುಕೋಣೆ ತನ್ನ ಅನುಭವದ ಮಾತನ್ನು ಇಂದು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರಿಗೆ ಮಾನಸಿಕ ಆರೋಗ್ಯ ಸಂದೇಶಗಳನ್ನು ಪೋಸ್ಟ್ ಮಾಡುವ ತನ್ನ ದೈನಂದಿನ ಅಭ್ಯಾಸವನ್ನು ಮುಂದುವರಿಸಿರುವ ಪಡುಕೋಣೆ, ಇಂದು ಈ ಮೇಲ್ಕಂಡ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ರಿಪೀಟ್ ಆಫ್ಟರ್ ಮಿ : "ಯು ಕೆನಾಟ್ ಸ್ನಾಪ್ ಔಟ್ ಆಫ್ ಡಿಪ್ರೆಷನ್" ("ನನ್ನ ನಂತರ ಪುನರಾವರ್ತಿಸಿ: ನೀವು ಖಿನ್ನತೆಯಿಂದ ಹೊರಬರಲು ಸಾಧ್ಯವಿಲ್ಲ" ಎಂದು ಪಡುಕೋಣೆ ಟ್ವಿಟರ್ ನಲ್ಲಿ ಬರೆದಿದ್ದಾರೆ. ಮುಂಬೈನ ತನ್ನ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಪಡುಕೋಣೆ ಮಾನಸಿಕ ಆರೋಗ್ಯ ಉಲ್ಲೇಖಗಳ ಸರಣಿಯನ್ನು ಪ್ರಾರಂಭಿಸಿದ್ದರು.
ತಮಾಶಾ ನಟಿ ಪಡುಕೋಣೆ, ಜೂನ್ 2015ರಲ್ಲಿ ತನ್ನ ಫೌಂಡೇಶನ್ 'ದಿ ಲೈವ್ ಲವ್ ಲಾಫ್ ಫೌಂಡೇಶನ್' (ಟಿಎಲ್ಎಲ್ಎಲ್ಎಫ್) ಮೂಲಕ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು. ಆನಂತರ ಟಿಎಲ್ಎಲ್ಎಲ್ಎಫ್ ವೇದಿಕೆಯ ಮೂಲಕ ನಟಿ ರಾಷ್ಟ್ರವ್ಯಾಪಿ ಜಾಗೃತಿ ಮತ್ತು ಡೆಸ್ಟಿಗ್ಮಟೈಸೇಶನ್ ಅಭಿಯಾನಗಳನ್ನು ಪ್ರಾರಂಭಿಸಿದರು.