ಲಖನೌ(ಉತ್ತರ ಪ್ರದೇಶ) :ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಡರಾತ್ರಿ ದಿಢೀರ್ ಆಗಿ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.
ನಿರಾಶ್ರಿತ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ - ಶೆಲ್ಟರ್ ಹೋಂಗಳಿಗೆ ಯೋಗಿ ಭೇಟಿ
ನಿನ್ನೆ ರಾತ್ರಿ ಏಕಾಏಕಿಯಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಗರದಲ್ಲಿರುವ ಕೆಲವು ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಲಕ್ಷ್ಮಣ್ ಮೇಳ ಮೈದಾನ, ದಲಿಗಂಜ್ ಮತ್ತು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಮೂರು ಆಶ್ರಯ ಮನೆಗಳಿಗೆ ಅಚ್ಚರಿ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಅಲ್ಲಿ ವಾಸವಾಗಿರುವ ಜನರಿಗೆ ಒದಗಿಸಲಾಗುತ್ತಿರುವ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿ ವಾಸವಿದ್ದ ಜನರ ಜೊತೆ ಸಂವಹನ ನಡೆಸಿ ಕುಂದುಕೊರತೆ ಕುರಿತು ಮಾಹಿತಿ ಪಡೆದುಕೊಂಡರು.
ಆದಿತ್ಯನಾಥ್ ಅವರೊಂದಿಗೆ ಜನಸಂಪನ್ಮೂಲ ಸಚಿವ ಮಹೇಂದ್ರ ನಾಥ್ ಸಿಂಗ್,ನಗರಾಭಿವೃದ್ಧಿ ಸಚಿವ ಅಶುತೋಷ್ ಟಂಡನ್, ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್, ಎಸ್ಎಸ್ಪಿ ಕಲಾನಿಧಿ ನೈತಾನಿ ಮತ್ತು ಪುರಸಭೆ ಆಯುಕ್ತ ಇಂದ್ರಮಣಿ ತ್ರಿಪಾಠಿ ಉಪಸ್ಥಿತರಿದ್ದರು. ಇದೇ ವೇಳೆ ಆಶ್ರಯ ಮನೆಗಳಲ್ಲಿ ವಾಸವಾದವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ, ಬಿಸಿ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.