ನವದೆಹಲಿ :ಯೋಗ ಎಂಬ ಪ್ರಾಚೀನ ವಿಜ್ಞಾನವು ಜಗತ್ತಿಗೆ ಭಾರತ ನೀಡಿದ ಬಲು ದೊಡ್ಡ ಕೊಡುಗೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿಗೆ ಭಾರತ ನೀಡಿದ ಬಲು ದೊಡ್ಡ ಕೊಡುಗೆ ಯೋಗ ; ರಾಷ್ಟ್ರಪತಿ ಕೋವಿಂದ್ - ರಾಮನಾಥ್ ಕೋವಿಂದ್ ಯೋಗ
ನಮ್ಮಲ್ಲಿರುವ ಹಲವು ಒತ್ತಡಗಳ ಮಧ್ಯೆ ಯೋಗ ಅಭ್ಯಾಸ ಮಾಡುವುದರಿಂದ ದೇಹವು ಸದೃಢವಾಗಿರುವ ಜೊತೆಗೆ ಮನಸ್ಸು ಪ್ರಶಾಂತವಾಗಿಡಲು ಸಹಾಯ..
ರಾಷ್ಟ್ರಪತಿ ಕೋವಿಂದ್
ಹೆಚ್ಚು ಹೆಚ್ಚು ಜನರು ಯೋಗವನ್ನು ಅಭ್ಯಾಸ ಮಾಡುತ್ತಾ, ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದನ್ನು ನೋಡಿ ಸಂತೋಷವಾಗಿದೆ. ನಮ್ಮಲ್ಲಿರುವ ಹಲವು ಒತ್ತಡಗಳ ಮಧ್ಯೆ, ವಿಶೇಷವಾಗಿ ಕೋವಿಡ್-19 ಸೃಷ್ಟಿರುವ ಈ ಬಿಕ್ಕಟ್ಟಿನ ನಡುವೆ ಯೋಗ ಅಭ್ಯಾಸ ಮಾಡುವುದರಿಂದ ದೇಹವು ಸದೃಢವಾಗಿರುವ ಜೊತೆಗೆ ಮನಸ್ಸು ಪ್ರಶಾಂತವಾಗಿಡಲು ಸಹಾಯ ಮಾಡುತ್ತದೆ ಎಂದು ಕೋವಿಂದ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಯೋಗಾಭ್ಯಾಸವನ್ನು ಮಾಡಿದ್ದಾರೆ.