ಕರ್ನಾಟಕ

karnataka

ETV Bharat / bharat

ನಿರ್ಬಂಧ ಸಡಿಲಿಸಿದರೂ Yes ಬ್ಯಾಂಕ್​ನತ್ತ No ಎನ್ನುತ್ತಿರುವ ಗ್ರಾಹಕರು!

ಕಳೆದ 13 ದಿನಗಳ ಹಿಂದೆ ಯೆಸ್ ಬ್ಯಾಂಕ್​ ಭಾರಿ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಗ್ರಾಹಕರಿಗೆ ವಿತ್​ಡ್ರಾ ಮಿತಿ ವಿಧಿಸಿತ್ತು. ಆದರೆ ಈ ನಿಯಮ ನಿನ್ನೆಯೇ ಕೊನೆಯಾದರೂ ಯೆಸ್ ಬ್ಯಾಂಕಿನ ಬಹುತೇಕ ಬ್ರಾಂಚ್​ಗಳಿಗೆ ಗ್ರಾಹಕರು ಮಾತ್ರ ಭೇಟಿ ನೀಡುತ್ತಿಲ್ಲ.

yes bank
ಯೆಸ್ ಬ್ಯಾಂಕ್

By

Published : Mar 19, 2020, 3:18 PM IST

ಮುಂಬೈ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹಣ ವಿತ್​ಡ್ರಾ ಮಾಡುವುದಕ್ಕೆ ವಿಧಿಸಲಾಗಿದ್ದ ಗರಿಷ್ಠ ಮಿತಿ ಬುಧವಾರ ಸಂಜೆ ವೇಳೆಗೆ ಕೊನೆಯಾದರೂ ಗುರುವಾರ ಯೆಸ್ ಬ್ಯಾಂಕಿನ ಬಹುತೇಕ ಬ್ರಾಂಚ್​ಗಳಲ್ಲಿ ಜನಸಂದಣಿ ಮಾತ್ರ ಕಂಡು ಬರಲಿಲ್ಲ.

ಕಳೆದ 13 ದಿನಗಳ ಹಿಂದೆ ಯೆಸ್ ಬ್ಯಾಂಕ್​ ಭಾರಿ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಗ್ರಾಹಕರಿಗೆ ವಿತ್​ಡ್ರಾ ಮಿತಿ ವಿಧಿಸಿತ್ತು. ಆಗ ಗ್ರಾಹಕರು ಎಲ್ಲಿ ತಮ್ಮ ಹಣ ಮುಳುಗಿ ಹೋಗುವುದೋ ಎಂದು ಚಿಂತಾಕ್ರಾಂತರಾಗಿ ಬ್ಯಾಂಕಿನ ಶಾಖೆಗಳಿಗೆ ಅಲೆದಾಡಿದ್ದರು. ಈಗ ಬುಧವಾರ ಸಂಜೆ 6ಕ್ಕೆ ವಿತ್​ಡ್ರಾ ಮಿತಿಯ ನಿಯಮ ತೆರವುಗೊಳಿಸಲಾಗಿದೆ. ಹೀಗಾಗಿ ಗುರುವಾರದಂದು ಭಾರಿ ಸಂಖ್ಯೆಯ ಗ್ರಾಹಕರು ತಮ್ಮ ಹಣ ಪಡೆಯಲು ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ರೀತಿಯ ಜನದಟ್ಟಣೆ ಶಾಖೆಗಳಲ್ಲಿ ಕಂಡು ಬಂದಿಲ್ಲ.

ಕೊರೊನಾ ವೈರಸ್ ಪರಿಣಾಮ ಅಥವಾ ಸ್ಟೇಟ್ ಬ್ಯಾಂಕ್ ನೀಡಿದ ಭರವಸೆ, ಇವೆರಡೂ ಕೆಲಸ ಮಾಡಿದಂತೆ ಕಾಣುತ್ತದೆ.

'ಯೆಸ್ ಬ್ಯಾಂಕ್ ಮುಚ್ಚುವುದಿಲ್ಲ ಎಂದು ನಮಗೆ ಖಾತರಿಯಾಗಿದೆ. ಎಸ್​ಬಿಐ ನಂಥ ದೊಡ್ಡ ಬ್ಯಾಂಕ್ ಯೆಸ್​ ಬ್ಯಾಂಕ್ ಬೆಂಬಲಕ್ಕೆ ನಿಂತಿರುವುದರಿಂದ ನಮ್ಮಲ್ಲಿ ವಿಶ್ವಾಸ ಮೂಡಿದೆ' ಎಂದು ಮುಂಬೈನ ಶಾಖೆಯೊಂದಕ್ಕೆ ಬಂದಿದ್ದ ಗ್ರಾಹಕ ಅನಿಸಿಕೆ ವ್ಯಕ್ತಪಡಿಸಿದರು.

ಯೆಸ್​ ಬ್ಯಾಂಕ್ ಪುನಶ್ಚೇತನ ಯೋಜನೆ ಅಂಗವಾಗಿ ಎಸ್​ಬಿಐ ಹಾಗೂ ಇನ್ನಿತರ ಏಳು ಹಣಕಾಸು ಸಂಸ್ಥೆಗಳು ಯೆಸ್​ ಬ್ಯಾಂಕ್​ನಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿವೆ.

ABOUT THE AUTHOR

...view details