ಮುಂಬೈ:ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಇಂದು ಸಂಜೆ 6 ರಿಂದ ಯೆಸ್ ಬ್ಯಾಂಕ್ ತನ್ನ ಪೂರ್ಣ ಬ್ಯಾಂಕಿಂಗ್ ಸೇವೆಗಳನ್ನು ಪುನರಾರಂಭಿಸಲಿದೆ.
ಯೆಸ್ ಬ್ಯಾಂಕ್ ನಿರ್ಬಂಧ ತೆರವು: ಇಂದಿನಿಂದ ಬ್ಯಾಂಕಿಂಗ್ ಸೇವೆಗಳು ಪುನರ್ ಆರಂಭ - Yes Bank to resume full banking services from today
ಯೆಸ್ ಬ್ಯಾಂಕ್ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಆರ್‌ಬಿಐ ತೆರವುಗೊಳಿಸಿದ್ದು,ಇಂದು ಸಂಜೆಯಿಂದ ಗ್ರಾಹಕರಿಗೆ ಬ್ಯಾಂಕಿಂಗ್ ಸೌಲಭ್ಯಗಳು ಪುನಃ ಆರಂಭವಾಗಲಿವೆ.
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್ ಮೇಲೆ ಆರ್‌ಬಿಐ ಹೇರಿದ್ದ ನಿರ್ಬಂಧ ಇಂದಿಗೆ ಕೊನೆಗೊಂಡಿದ್ದು, ಇಂದು ಸಂಜೆ 6 ಗಂಟೆಯಿಂದ ಬ್ಯಾಂಕ್ನ ಎಲ್ಲಾ ಸೇವೆಗಳು ಪುನರ್ ಆರಂಭವಾಗಲಿವೆ. ಹೀಗಾಗಿ ಗ್ರಾಹಕರು ಬ್ಯಾಂಕ್‌ಗೆ ತೆರಳಿ ಸೇವೆ ಪಡೆಯಬಹುದು. ಹಾಗೂ ಬ್ಯಾಂಕ್ನ ಎಲ್ಲಾ ಡಿಜಿಟಲ್ ಸೇವೆಗಳು, ಆನ್ಲೈನ್ ಸೇವೆಗಳು ಕೂಡ ಇಂದಿನಿಂದ ಪುನಃ ಲಭ್ಯವಾಗಲಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಚ್ 5 ರಂದು ಬ್ಯಾಂಕ್‌ಗೆ ನಿಷೇಧ ವಿಧಿಸಿತ್ತು ಮತ್ತು 50,000 ರೂ. ಹಣ ಮಾತ್ರ ಡ್ರಾ ಮಾಡಲು ಯೆಸ್ ಬ್ಯಾಂಕ್ ಅವಕಾಶ ನೀಡಿತ್ತು.