ಮುಂಬೈ:ಖಾಸಗಿ ರಂಗದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾಗಿರುವ ಯೆಸ್ ಬ್ಯಾಂಕ್ ಆರ್ಥಿಕ ತೊಂದರೆ ಅನುಭವಿಸುತ್ತಿದ್ದು, ಇದರ ಮೇಲೆ ಈಗಾಗಲೇ ಆರ್ಬಿಐ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, 50 ಸಾವಿರ ರೂ ವಿತ್ ಡ್ರಾ ಮಾಡಿಕೊಳ್ಳುವಂತೆ ನಿರ್ಬಂಧ ಹೇರಿದೆ.
ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು...ಕೆಲಸ ನಿರ್ವಹಿಸುತ್ತಿಲ್ಲ ಫೋನ್ ಪೇ! - ಆರ್ಬಿಐ
ಆರ್ಥಿಕ ತೊಂದರೆಗೊಳಗಾಗಿರುವ ಯೆಸ್ ಬ್ಯಾಂಕ್ ಜತೆ ಈ ಹಿಂದೆ ಹೊಂದಾಣಿಕೆ ಮಾಡಿಕೊಂಡಿದ್ದ ಫೋನ್ ಪೇ ಕೂಡ ಸಮಸ್ಯೆಗೊಳಗಾಗಿದ್ದು, ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಇದೀಗ ಈ ಬ್ಯಾಂಕ್ನಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಪೋನ್ ಪೇ ಕೂಡ ತೊಂದರೆ ಅನುಭವಿಸುತ್ತಿದೆ. ಹಣ ವರ್ಗಾವಣೆ ಮೊಬೈಲ್ ಆಪ್ ಫೋನ್ ಪೇ ಯೆಸ್ ಬ್ಯಾಂಕ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ, ಇದೀಗ ಯೆಸ್ ಬ್ಯಾಂಕ್ ಮೇಲಿನ ನಿಷೇಧದಿಂದ ಫೋನ್ ಪೇ ಸೇವೆಗಳು ಸಿಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಫೋನ್ ಪೇ ಸಿಇಒ ಸಮಿರ್ ಟ್ವೀಟ್ ಮೂಲಕ ಗ್ರಾಹಕರ ಬಳಿ ಕ್ಷಮೆಯಾಚನೆ ಮಾಡಿದ್ದಾರೆ.
ನಾವು ತಾತ್ಕಾಲಿಕವಾಗಿ ಸೇವೆ ನೀಡುತ್ತಿಲ್ಲ. ಇದರಿಂದ ಉಂಟಾಗಿರುವ ತೊಂದರೆಗೆ ಕ್ಷಮೆಯಾಚನೆ ಮಾಡುತ್ತೇವೆ ಎಂದಿರುವ ಅವರು, ಮರಳಿ ಸೇವೆ ಮುಂದುವರಿಸಲು ಕೆಲಸ ಮಾಡುತ್ತಿದ್ದು, ಕೆಲವೇ ಗಂಟೆಗಳಲ್ಲಿ ಮರಳಿ ಸೇವೆ ನೀಡಲಿದ್ದೇವೆ ಎಂದಿದ್ದಾರೆ. ಇನ್ನು ಮುಂಬೈ ಷೇರು ಪೇಟೆಯಲ್ಲಿ ಯೆಸ್ ಬ್ಯಾಂಕ್ ಷೇರು ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಶೇ. 59ರಷ್ಟು ಕುಸಿತ ಕಂಡಿದೆ.