ಕರ್ನಾಟಕ

karnataka

ETV Bharat / bharat

ಕೊರೊನಾ ಹೊಡೆತ.. ಯೆಸ್ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯ ಆಸ್ತಿ ಎಂದು ಘೋಷಿಸಲು ಸಾಧ್ಯವಿಲ್ಲ: ಕೋರ್ಟ್​

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ, ಸಾಲದ ಕಂತುಗಳನ್ನು ಪಾವತಿಸಲು ವಿಫಲವಾದ ಯೆಸ್ ಬ್ಯಾಂಕ್​ನ ಖಾತೆಯನ್ನು ನಿಷ್ಕ್ರಿಯ ಆಸ್ತಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದರು.

By

Published : Apr 7, 2020, 10:45 AM IST

yes bank
yes bank

ನವದೆಹಲಿ: ಕೊರೊನಾ ವೈರಸ್​​ನಿಂದಾಗಿ ಸಾಲದ ಕಂತುಗಳನ್ನು ಪಾವತಿಸಲು ವಿಫಲವಾದ ಕಾರಣ ಯೆಸ್ ಬ್ಯಾಂಕ್​ನ ಖಾತೆಯನ್ನು ನಿಷ್ಕ್ರಿಯ ಆಸ್ತಿ (ಎನ್‌ಪಿಎ) ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ವಿಚಾರಣೆ ನಡೆಸಿದರು. ಏಪ್ರಿಲ್ 25ರ ಮೊದಲು ಬಾಕಿ ಉಳಿದಿರುವ ಕಂತುಗನ್ನು ಪಾವತಿ ಮಾಡುವುದಾಗಿ ಅನಂತ್ ರಾಜ್ ಲಿಮಿಟೆಡ್‌ನ ವಕೀಲರು ಹೇಳಿದ್ದಾರೆ. ಜನವರಿ 1, 2020ರಿಂದ ಬಾಕಿ ಉಳಿದಿರುವ ಕಂತುಗಳನ್ನು ಬಡ್ಡಿಯ ಜೊತೆಗೆ ಲಾಕ್‌ಡೌನ್ ಇದ್ದರೂ ಪಾವತಿ ಮಾಡುವುದಾಗಿ ಕಂಪೆನಿ ಹೇಳಿದೆ.

ಈ ವರ್ಷದ ಜನವರಿಯಿಂದ ಸಾಲದ ಕಂತುಗಳನ್ನು ಪಾವತಿಸಲು ವಿಫಲವಾದ ಕಾರಣ, ಯಾವುದೇ ಕ್ರಮ ಕೈಗೊಳ್ಳದಂತೆ ಬ್ಯಾಂಕಿಗೆ ನಿರ್ದೇಶನ ಕೋರಿ ಅನಂತ್ ರಾಜ್ ಲಿಮಿಟೆಡ್‌ ಕಂಪನಿಯ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಮೇ 4ರಂದು ಮುಂದಿನ ವಿಚಾರಣೆ ನಡೆಸುವುದಾಗಿ ನಿಗದಿಪಡಿಸಲಾಗಿದೆ.

ಪ್ರಪಂಚದಾದ್ಯಂತ ಕೋವಿಡ್-19 ಹರಡಿರುವ ಕಾರಣ ಆರ್ಥಿಕತೆ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗಾಗಿ ಪಾವತಿಸಲು ಸಮಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಯೆಸ್ ಬ್ಯಾಂಕ್ ಹೇಳಿದೆ.

ABOUT THE AUTHOR

...view details