ಕರ್ನಾಟಕ

karnataka

ETV Bharat / bharat

ದಿಲ್ಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ - ಬೆಂಗಳೂರು ಮೆಟ್ರೋ ಕಾಮಗಾರಿ

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಸಿಎಂ ಬಿಎಸ್​ವೈ ತೆರಳಿ, ರಕ್ಷಣಾ ಇಲಾಖೆಯ ಭೂಮಿಯನ್ನ ಬೆಂಗಳೂರು ಮೆಟ್ರೋಗೆ ನೀಡುವಂತೆ ಮನವಿ ಮಾಡಿದರು. ಜೊತೆಗೆ ಬೆಂಗಳೂರಲ್ಲೇ 2021ರ ಏರೋ ಇಂಡಿಯಾ ಶೋ ಆಯೋಜಿಸುವಂತೆ ಮನವಿ ಮಾಡಿದರು.

yeddyurappa-meets-rajnath-singh-at-delhi
ದಿಲ್ಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ

By

Published : Mar 7, 2020, 2:54 AM IST

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸಿಎಂ. ಬಿ.ಎಸ್.ಯಡಿಯೂರಪ್ಪ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ಶುಕ್ರವಾರ ಭೇಟಿಯಾದರು.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಸಿಎಂ ಬಿಎಸ್​ವೈ ತೆರಳಿ, ರಕ್ಷಣಾ ಇಲಾಖೆಯ ಭೂಮಿಯನ್ನ ಬೆಂಗಳೂರು ಮೆಟ್ರೋಗೆ ನೀಡುವಂತೆ ಮನವಿ ಮಾಡಿದರು. ಜೊತೆಗೆ ಬೆಂಗಳೂರಲ್ಲೇ 2021ರ ಏರೋ ಇಂಡಿಯಾ ಶೋ ಆಯೋಜಿಸುವಂತೆ ಮನವಿ ಮಾಡಿದರು.

ದಿಲ್ಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ

ವೆಲ್ಲಾರ್ ಜಂಕ್ಷನ್ ಹಾಗೂ ಎಂಜಿ ಏರಿಯಾದಲ್ಲಿನ ಮೆಟ್ರೋ ಕಾಮಗಾರಿಗಾಗಿ ರಕ್ಷಣಾ ಇಲಾಖೆಯಯ ಈಗಾಗಲೇ ಭೂಮಿಯನ್ನು ಹಸ್ತಾಂತರಿಸಿದೆ. ಲ್ಯಾಂಗ್​ಫೋರ್ಡ್​ ಟೌನ್ ಬಳಿ ಮೆಟ್ರೋ ಕಾಮಗಾರಿಗೆ ಅಗತ್ಯವಿರುವ ರಕ್ಷಣಾ ಭೂಮಿಯನ್ನು ಕೂಡಲೇ ನೀಡಬೇಕು. ವಿಳಂಬವಾದ್ರೆ ಯೋಜನೆ ಕಾಮಗಾರಿಯೂ ತಡವಾಗುತ್ತದೆ. ಆದ್ದರಿಂದ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಸಿಎಂ ಬಿಎಸ್​ವೈ ಪತ್ರದಲ್ಲಿ ತಿಳಿಸಿದ್ದಾರೆ.

ಈ ವೇಳೆ ಸಿಎಂ ಯಡಿಯೂರಪ್ಪ ಜೊತೆ ಡಿಸಿಎಂ ಗೋವಿಂದ ಕಾರಜೋಳ ಕೂಡ ಇದ್ದರು.

ABOUT THE AUTHOR

...view details