ಧರ್ಮಶಾಲಾ: ದಲೈ ಲಾಮಾ ಅವರ 85 ನೇ ಜನ್ಮದಿನದ ಹಿನ್ನೆಲೆ ಕೇಂದ್ರ ಟಿಬೆಟಿಯನ್ ಆಡಳಿತವು ಜುಲೈ 1 ರಿಂದ 'ಕೃತಜ್ಞತೆಯ ವರ್ಷ' ಆಚರಿಸಲಿದೆ.
ಧರ್ಮಶಾಲಾ ಮೂಲದ ಸಿಟಿಎ, ದಲೈ ಲಾಮಾ ಅವರ 85 ನೇ ಜನ್ಮದಿನವನ್ನು ಜುಲೈ 1 ರಿಂದ ಜೂನ್ 30 ರವರೆಗೆ ವಿಶ್ವಾದ್ಯಂತ ವರ್ಚುವಲ್ ಘಟನೆಗಳೊಂದಿಗೆ ಆಚರಿಸಲಿದೆ ಎಂದು ಹೇಳಿದೆ.

ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಜುಲೈ 6 ರಂದು 85 ನೇ ವರ್ಷಕ್ಕೆ ಕಾಲಿಡುತ್ತಾರೆ. ವಿಶ್ವಾದ್ಯಂತದ ಸಿಟಿಎ ಮತ್ತು ಟಿಬೆಟಿಯನ್ನರು ಜುಲೈ 1 ರಿಂದ ದಲೈ ಲಾಮಾ ಅವರ ಅತ್ಯುತ್ತಮ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಮತ್ತು ಅವರ ಬೋಧನೆಗಳನ್ನು ಹಂಚಿಕೊಳ್ಳಲು, ಉತ್ತೇಜಿಸಲು ಮತ್ತು ಆಚರಿಸಲು ಜುಲೈ 1 ರಿಂದ 'ಕೃತಜ್ಞತೆಯ ವರ್ಷ' ಎಂದು ಆಚರಿಸುತ್ತಾರೆ ಎಂದು ಸಿಟಿಎ ತಿಳಿಸಿದೆ.
ಮುಖ್ಯ ಕಾರ್ಯಕ್ರಮವನ್ನು ಜುಲೈ 6 ರಂದು ಧರ್ಮಶಾಲಾದ ಟಿಬೆಟಿಯನ್ ಸಂಸತ್ತಿನಲ್ಲಿ 50 ಗಣ್ಯರನ್ನು ಒಟ್ಟುಗೂಡಿಸುವ ಮೂಲಕ ಆಚರಿಸಲಾಗುವುದು. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಗೃಹ ಸಚಿವಾಲಯದ ಮಾರ್ಗಸೂಚಿಗಳ ಕಾರಣ ಕಶಾಗ್‌ನಲ್ಲಿ ಗಣ್ಯರ ಸಂಖ್ಯೆಗೆ ನಿರ್ಬಂಧ ಹೇರಲಾಗಿದೆ ಎಂದು ಎಂದು ಸಿಟಿಎ ಅಧ್ಯಕ್ಷ ಲೋಬ್ಸಂಗ್ ಸಂಗೇ ತಿಳಿಸಿದ್ದಾರೆ.