ಕರ್ನಾಟಕ

karnataka

ETV Bharat / bharat

'ಕೈ' ಬಿಟ್ಟು 'ಕಮಲ'ದತ್ತ ಸಿಂದಿಯಾ.. 'ಘರ್​ ವಾಪಸಿ' ಸಂತಸ ಎಂದ ಬಿಜೆಪಿ ಮುಖಂಡೆ! - ಬಿಜೆಪಿ ಸೇರಿಕೊಳ್ಳಲಿದ್ದಾರೆ ಸಿಂದಿಯಾ

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಜ್ಯೋತಿರಾದಿತ್ಯ ಸಿಂದಿಯಾ ರಾಜೀನಾಮೆ ಮೂಲಕ ಫೈನಲ್​ ಹಂತಕ್ಕೆ ಬಂದು ತಲುಪಿದ್ದು, ಇದರ ಬೆನ್ನಲ್ಲೇ ಅವರು ಸಂಜೆ ಕಮಲ ಮುಡಿಯಲಿದ್ದಾರೆ ಎಂಬ ಗಂಭೀರ ಮಾತು ಕೇಳಿ ಬರುತ್ತಿವೆ.

Jyotiraditya
'ಕೈ' ಬಿಟ್ಟು 'ಕಮಲ'ದತ್ತ ಸಿಂದಿಯಾ

By

Published : Mar 10, 2020, 3:04 PM IST

Updated : Mar 10, 2020, 3:18 PM IST

ಭೋಪಾಲ್​:ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಭೇಟಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್​​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್​ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಅಂದುಕೊಡಿರುವಂತೆ ನಡೆದರೆ ಇಂದು ಸಂಜೆ ಆರು ಗಂಟೆಗೆ ಅವರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ.

'ಘರ್​ ವಾಪಸಿ' ಸಂತಸ ತಂದಿದೆ ಎಂದ ಬಿಜೆಪಿ ಮುಖಂಡೆ

ಕಳೆದೆರಡು ದಿನಗಳಿಂದ ಮಧ್ಯಪ್ರದೇಶದಲ್ಲಿ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ನಡೆಯುತ್ತಿದ್ದು, ಈಗಾಗಲೇ ಕಾಂಗ್ರೆಸ್​ನ 20ಕ್ಕೂ ಹೆಚ್ಚು ಶಾಸಕರು( ಆರು ಸಚಿವರು ಸೇರಿ) ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಹ ಸಲ್ಲಿಕೆ ಮಾಡಿದ್ದಾರೆ.

ಇದೀಗ ಅವರು ಸಂಜೆ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಜ್ಯೋತಿರಾದಿತ್ಯ ಬಿಜೆಪಿ ಸೇರಿಕೊಂಡರೆ ರಾಜ್ಯಸಭೆ ಟಿಕೆಟ್​ ನೀಡುವುದು ಬಹುತೇಕ ಖಚಿತವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ಮುಖಂಡೆ ಯಶೋಧರಾ ಸಿಂದಿಯಾ, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 'ಘರ್​ ವಾಪಸಿ' ಆಗುತ್ತಿರುವುದು ನಿಜಕ್ಕೂ ಸಂತಸ ಎಂದಿದ್ದಾರೆ.

ಮಧ್ಯಪ್ರದೇಶದ ವಿಧಾನಸಭೆ 228 ಶಾಸಕರನ್ನೊಳಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ 114 ಸ್ಥಾನ ಹಾಗೂ ಬಿಜೆಪಿ 107 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿಕೊಂಡಿತ್ತು. ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ವಿಫಲಗೊಂಡಿತ್ತು. ಹೀಗಾಗಿ ಕಮಲನಾಥ್ ನೇತೃತ್ವದ ಕಾಂಗ್ರೆಸ್​​ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

Last Updated : Mar 10, 2020, 3:18 PM IST

ABOUT THE AUTHOR

...view details