ಕರ್ನಾಟಕ

karnataka

ETV Bharat / bharat

ಸಾವನ್ ತಿಂಗಳ ಮೊದಲ ಸೋಮವಾರ ಆರಾಧನೆ: ಭಕ್ತರಿಗೆ ಆನ್‌ಲೈನ್‌ನಲ್ಲಿ ದೇವರ ದರ್ಶನ - ಕೊರೊನಾ ಹಿನ್ನೆಲೆ ಮುಚ್ಚಿದ ದೇವಾಲಯ

ಕೊರೊನಾ ಹಿನ್ನೆಲೆ ಈ ಬಾರಿ ದೇವಾಲಯಗಳು ಮುಚ್ಚಿರುವುದರಿಂದ ಭಕ್ತರಿಗೆ ಪವಿತ್ರ ದ್ವಾದಶ ಜ್ಯೋತಿರ್ಲಿಂಗದ ಜಲಾಭಿಷೇಕ ಮಾಡಲು ಅವಕಾಶ ಸಿಗುವುದಿಲ್ಲ. ಈ ಬಾರಿ ಜನರು ಆನ್‌ಲೈನ್‌ನಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ.

deoghar
deoghar

By

Published : Jul 6, 2020, 11:31 AM IST

ದಿಯೋಘರ್ (ಜಾರ್ಖಂಡ್): ಇಂದು ಸಾವನ್​ನ ಮೊದಲ ಸೋಮವಾರ. ಈ ಬಾರಿ, ಶ್ರಾವಣ ತಿಂಗಳಲ್ಲಿ ಐದು ಸೋಮವಾರಗಳಿರುವುದರಿಂದ ಇದನ್ನು ಶುಭ ಸಂಕೇತ ಎಂದು ಪರಿಗಣಿಸಲಾಗಿದೆ. ಪವಿತ್ರ ತಿಂಗಳು ಸೋಮವಾರದಿಂದಲೇ ಪ್ರಾರಂಭವಾಗುತ್ತಿದೆ.

ತಜ್ಞರ ಪ್ರಕಾರ, ಸೋಮವಾರ ಚಂದ್ರನ ದಿನ ಮತ್ತು ಚಂದ್ರನು ಶಿವನಿಗೆ ತುಂಬಾ ಪ್ರಿಯ. ಆದ್ದರಿಂದ, ಶ್ರಾವಣ ತಿಂಗಳಲ್ಲಿ ಸೋಮವಾರದ ಪೂಜೆ ವಿಶೇಷ ಪ್ರಾಮುಖ್ಯತೆ ಹೊಂದಿದೆ ಎಂದು ಪರಿಗಣಿಸಲಾಗಿದೆ.

ಕೊರೊನಾ ಹಿನ್ನೆಲೆ ಈ ಬಾರಿ ದೇವಾಲಯಗಳು ಮುಚ್ಚಿರುವುದರಿಂದ ಭಕ್ತರಿಗೆ ಪವಿತ್ರ ದ್ವಾದಶ ಜ್ಯೋತಿರ್ಲಿಂಗದ ಜಲಾಭಿಷೇಕ ಮಾಡಲು ಅವಕಾಶ ಸಿಗುವುದಿಲ್ಲ. ಈ ಬಾರಿ ಜನರು ಆನ್‌ಲೈನ್‌ನಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಬಾಬಾಧಾಮ್​ನಲ್ಲಿ ಶ್ರಾವಣ ಮೇಳ ನಡೆಸಲು ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಹೈಕೋರ್ಟ್ ವಿಚಾರಣೆ ನಡೆಸಿ, ಆನ್‌ಲೈನ್ ದರ್ಶನ ನೀಡುವಂತೆ ಆದೇಶಿಸಿತು.

ಪ್ರತಿ ವರ್ಷ ಸಾವನ್ ತಿಂಗಳಲ್ಲಿ ಬಾಬಾಧಾಂನಲ್ಲಿ ಶ್ರಾವಣಿ ಜಾತ್ರೆಯನ್ನು ಆಯೋಜಿಸಲಾಗುತ್ತಿತ್ತು. ಈ ಜಾತ್ರೆಯಲ್ಲಿ ಅನೇಕ ರಾಜ್ಯಗಳ ಭಕ್ತರು ಭಾಗವಹಿಸುತ್ತಿದ್ದರು. ಹೆಚ್ಚಿನ ಸಂಖ್ಯೆಯ ಭಕ್ತರು ಜಲಾಭಿಷೇಕ ಮಾಡುತ್ತಿದ್ದರು.

ಆದರೆ, ಈ ಬಾರಿ ಶ್ರಾವಣ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದು ಭಕ್ತರಲ್ಲಿ ನಿರಾಶೆ ಮೂಡಿಸಿದೆ. ಆದರೂ ಆನ್‌ಲೈನ್ ದರ್ಶನದ ಅವಕಾಶ ಸ್ವಲ್ಪ ತೃಪ್ತಿ ಮೂಡಿಸಿದೆ.

ABOUT THE AUTHOR

...view details