ಲಖ್ನೋ:ಅಮೇಥಿಯಲ್ಲಿ ಸೋಲುವ ಮುನ್ಸೂಚನೆಯಿಂದ ರಾಹುಲ್ ಗಾಂಧಿ ಕೇರಳಕ್ಕೆ ಓಡಿಹೋಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಉತ್ತರಪ್ರದೇಶದ ಧಮ್ಪುರದಲ್ಲಿ ಮಾತನಾಡಿದ ಅವರು, ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ದೇಶದ ಭದ್ರತೆಯೊಂದಿಗೆ ಆಟವಾಡುತ್ತಿದೆ. ವೋಟ್ ಬ್ಯಾಂಕ್ಗಾಗಿಯೇ ರಾಹುಲ್ ಅಮೇಥಿಯಿಂದ ಕೇರಳಕ್ಕೆ ಓಡಿಹೋಗಿದ್ದಾರೆ ಎಂದು ಕುಟುಕಿದರು.
ರಾಹುಲ್ ಕೇರಳಕ್ಕೆ ಓಡಿಹೋಗಿದ್ದಾರೆ ಎಂದ ಅಮಿತ್ ಶಾ ಕಾಂಗ್ರೆಸ್ ಸದಾ ಹಿಂದೂಗಳ ಬಗ್ಗೆ ಮಾತನಾಡುತ್ತಿರುತ್ತೆ. ಹಿಂದೂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತೆ. ಕಾಂಗ್ರೆಸಿಗರಿಗೆ ಲಷ್ಕರ್ ಎ ತೊಯ್ಬಾದ ಭಯವಿಲ್ಲ, ಆದರೆ ಹಿಂದೂಗಳೇ ಆತಂಕಕಾರಿ ಎನ್ನುತ್ತಾರೆ. ಹಿಂದುತ್ವ ಎಂಬುದು ಭಯೋತ್ಪಾದನೆಯೇ? ಎಂದು ಶಾ ಪ್ರಶ್ನಿಸಿದರು.
ಹಿಂದೂಗಳು ವಿಶ್ವ ಸಹೋದರತ್ವ ಭಾವನೆಯಿಂದ ಜೀವನ ಮಾಡುತ್ತಿದ್ದಾರೆ. ಇರುವೆಗೂ ತೊಂದರೆ ಕೊಡದೆ, ಕಾಪಾಡುತ್ತಿದ್ದಾರೆ. ಆದರೆ ಹಿಂದೂ ಭಯೋತ್ಪಾದನೆ ಎಂದು ಕೂಗಾಡುವ ರಾಹುಲ್ ಬಾಬಾ ನಿಮಗೆ ನಾಚಿಕೆಯಾಗಬೇಕು.ರಾಹುಲ್ದೇಶದ ಜನರ ಕ್ಷಮೆ ಯಾಚಿಸಬೇಕಿತ್ತು. ಆದರೆ ಮತ ಬ್ಯಾಂಕ್ಗಾಗಿ ಹಾಗೆ ಮಾಡಲಿಲ್ಲ ಎಂದು ಅಮಿತ್ ಶಾ ಛೇಡಿಸಿದರು.
ದೇಶದ ಜನರು ಉಗ್ರರ ವಿರುದ್ಧ ನಡೆದ ದಾಳಿಯನ್ನು ಕೊಂಡಾಡಿದರು. ಆದರೆ ರಾಹುಲ್ ಗುರು ಸ್ಯಾಂ ಪಿತ್ರೋಡಗೆ ಇದು ಒಳ್ಳೆಯ ಕಾರ್ಯವಲ್ಲವಂತೆ ಎಂದು ಬಿಜೆಪಿ ಅಧ್ಯಕ್ಷ ವಾಗ್ದಾಳಿ ನಡೆಸಿದರು.