ಕರ್ನಾಟಕ

karnataka

ETV Bharat / bharat

ಜಗತ್ತಿನಲ್ಲಿ ಆರು ಕೋಟಿಗೂ ಅಧಿಕ ಕೊರೊನಾ ಸೋಂಕಿತರು... ಬಲಿಯಾದವರೆಷ್ಟು ಗೊತ್ತೇ?

ಕೊರೊನಾ​ ಪೀಡಿತ ವಿಶ್ವದ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 1,31,38,204 ಇದ್ದು, ಮೃತರ ಸಂಖ್ಯೆ 2,68,221ಕ್ಕೆ ಏರಿಕೆಯಾಗಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

By

Published : Nov 26, 2020, 4:58 PM IST

ಹೈದರಾಬಾದ್​: ಪ್ರಪಂಚದಲ್ಲಿ ಬರೋಬ್ಬರಿ 6,07,36,801 ಜನರಿಗೆ ಕಿಲ್ಲರ್​ ಕೊರೊನಾ ವೈರಸ್​ ಅಂಟಿದ್ದು, 14,27,080 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 4,20,42,128 ಮಂದಿ ಗುಣಮುಖರಾಗಿದ್ದಾರೆ.

ಸದ್ಯ ನ್ಯೂಜಿಲೆಂಡ್​ ಸರಣಿಯಲ್ಲಿ ಆಡಬೇಕಿದ್ದ ಪಾಕಿಸ್ತಾನ ಕ್ರಿಕೆಟ್​ ತಂಡದ ಆರು ಆಟಗಾರರ ವರದಿ ಕೂಡ ಕೋವಿಡ್​ ಪಾಸಿಟಿವ್​ ಬಂದಿದ್ದು, ಇವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,31,38,204 ಇದ್ದು, ಮೃತರ ಸಂಖ್ಯೆ 2,68,221ಕ್ಕೆ ಏರಿಕೆಯಾಗಿದೆ. ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 92,66,705 ಕೇಸ್​ಗಳು ಪತ್ತೆಯಾಗಿದ್ದು, 1,35,261 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 61,66,898 ಪ್ರಕರಣಗಳು ಹಾಗೂ 1,70,799 ಸಾವುಗಳು ವರದಿಯಾಗಿದೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 21,62,503 ಕೇಸ್​​ಗಳಿದ್ದು, 37,538 ಜನರು ಸಾವನ್ನಪ್ಪಿದ್ದಾರೆ. ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 86,490 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ABOUT THE AUTHOR

...view details