ಕರ್ನಾಟಕ

karnataka

ETV Bharat / bharat

ಕೊರೊನಾ ಚಕ್ರವ್ಯೂಹದಲ್ಲಿ 4.37 ಕೋಟಿ ಜನರು - ಕೋವಿಡ್​ ಟ್ರ್ಯಾಕರ್​

ಪ್ರಪಂಚದ ಕೊರೊನಾ​ ಪೀಡಿತ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಕೆಲ ದಿನಗಳಿಂದ ಸತತವಾಗಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಮೃತರ ಪ್ರಮಾಣ ಕೂಡ ಶೇ.1.5ಕ್ಕೆ ಇಳಿಕೆಯಾಗಿದೆ.

Global COVID-19 tracker
ಕೊರೊನಾ ಚಕ್ರವ್ಯೂಹ

By

Published : Oct 27, 2020, 5:54 PM IST

ಹೈದರಾಬಾದ್​:ಕೊರೊನಾ ರೌದ್ರಾವತಾರಕ್ಕೆ ಜಗತ್ತೇ ತತ್ತರಿಸಿದೆ. ವಿಶ್ವದಾದ್ಯಂತ ಬರೋಬ್ಬರಿ 4,37,76,587 ಜನರಿಗೆ ಕಿಲ್ಲರ್​ ಕೊರೊನಾ ವೈರಸ್​ ಅಂಟಿದ್ದು, 11,64,515 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 3,21,79,748 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 89,62,783 ಇದ್ದು, ಮೃತರ ಸಂಖ್ಯೆ 2,31,045ಕ್ಕೆ ಏರಿಕೆಯಾಗಿದೆ.

ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 79,45,888 ಕೇಸ್​ಗಳು ಪತ್ತೆಯಾಗಿದ್ದು, 1,19,535 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಆದರೆ ಭಾರತದಲ್ಲಿ ಸತತವಾಗಿ ಕೆಲ ದಿನಗಳಿಂದ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಮೃತರ ಪ್ರಮಾಣ ಕೂಡ ಶೇ.1.5ಕ್ಕೆ ಇಳಿಕೆಯಾಗಿದೆ.

ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 54,11,550 ಪ್ರಕರಣಗಳು ಹಾಗೂ 1,57,451 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 15,31,224 ಕೇಸ್​​ಗಳಿದ್ದು, 26,269 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,826 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ABOUT THE AUTHOR

...view details