ಕರ್ನಾಟಕ

karnataka

By

Published : Oct 10, 2020, 5:16 PM IST

ETV Bharat / bharat

ಪ್ರಪಂಚದಲ್ಲಿ 10.7 ಲಕ್ಷ ಜನರು ಕೊರೊನಾಗೆ ಬಲಿ..!

ಅಮೆರಿಕದಲ್ಲಿ 2,18,648, ಬ್ರೆಜಿಲ್​ನಲ್ಲಿ 1,49,692 ​, ಭಾರತದಲ್ಲಿ 1,07,450, ಮೆಕ್ಸಿಕೋದಲ್ಲಿ 83,507 ಹಾಗೂ ಇಂಗ್ಲೆಂಡ್​ನಲ್ಲಿ 42,679 ಜನರು ಕಿಲ್ಲರ್​​ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ​ ಪೀಡಿತ ರಾಷ್ಟ್ರಗಳ ಪೈಕಿ ಈ ಐದು ದೇಶಗಳು ಸಾವಿನ ಸಂಖ್ಯೆಯಲ್ಲಿ ಮೊದಲೈದು ಸ್ಥಾನಗಳಲ್ಲಿವೆ.

Worldover corona cases and deaths
ಪ್ರಪಂಚದಲ್ಲಿ 10.7 ಲಕ್ಷ ಜನರು ಕೊರೊನಾಗೆ ಬಲಿ

ಹೈದರಾಬಾದ್​: 10,72,712 ಜನರು ಮಾರಣಾಂತಿಕ ಕೋವಿಡ್​ನಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಅಮೆರಿಕ, ಬ್ರೆಜಿಲ್​​, ಭಾರತ, ಮೆಕ್ಸಿಕೋ ಹಾಗೂ ಇಂಗ್ಲೆಂಡ್​ ಸಾವಿನ ಸಂಖ್ಯೆಯಲ್ಲಿ ಮೊದಲ ಐದು ಸ್ಥಾನಗಳಲ್ಲಿವೆ.

ವಿಶ್ವಾದ್ಯಂತ ಬರೋಬ್ಬರಿ 3,71,10,987(3.71ಕೋಟಿ) ಮಂದಿ ಕೊರೊನಾ ಸುಳಿಯಲ್ಲಿ ಸಿಲುಕಿದ್ದು, ಇವರಲ್ಲಿ 2,78,97,003(2.78 ಕೋಟಿ) ಸೋಂಕಿತರು ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಎರಡರಲ್ಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 78,94,478 ಇದ್ದು, ಮೃತರ ಸಂಖ್ಯೆ 2,18,648ಕ್ಕೆ ಏರಿಕೆಯಾಗಿದೆ.

ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 69,77,008(69 ಲಕ್ಷ) ಕೇಸ್​ಗಳು ಪತ್ತೆಯಾಗಿದ್ದು, 1,07,450 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 50,57,190 ಪ್ರಕರಣಗಳು ಹಾಗೂ 1,49,692 ಸಾವುಗಳು ವರದಿಯಾಗಿವೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 12,72,238 ಕೇಸ್​​ಗಳಿದ್ದು, 22,257 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ABOUT THE AUTHOR

...view details