ಕರ್ನಾಟಕ

karnataka

ETV Bharat / bharat

ಪ್ರಪಂಚದಲ್ಲಿ ಮೂರು ಕೋಟಿ ದಾಟಿದ ಸೋಂಕಿತರು; ಅರ್ಧಕ್ಕೂ ಹೆಚ್ಚು ಗುಣಮುಖ

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ, ಭಾರತ ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ.

Global COVID-19 tracker
ವಿಶ್ವಕ್ಕೆ ಮಾರಕವಾದ ಕೊರೊನಾ

By

Published : Oct 8, 2020, 4:07 PM IST

ಹೈದರಾಬಾದ್​:ಕೊರೊನಾ ವೈರಸ್ ಸೋಂಕು ಅಬ್ಬರಕ್ಕೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಪ್ರಪಂಚದಾದ್ಯಂತ ಒಟ್ಟು 3,63,94,156 ಮಂದಿಗೆ ಸೋಂಕು ದೃಢಪಟ್ಟಿದ್ದು, 10,60,462 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಚೇತರಿಕೆಯ ಪ್ರಮಾಣದಲ್ಲಿಯೂ ಕೂಡ ಏರಿಕೆ ಕಂಡು ಬಂದಿದೆ. ಸೋಂಕಿತರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಅಂದರೆ 2,74,12,315 ಜನರು ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 77,76,224 ಇದ್ದು, ಮೃತರ ಸಂಖ್ಯೆ 2,16,784ಕ್ಕೆ ಏರಿಕೆಯಾಗಿದೆ.

ಇನ್ನು ಭಾರತವು ಎರಡನೇ ಸ್ಥಾನದಲ್ಲಿದ್ದು, 68,35,655 ಮಂದಿ ಸೋಂಕಿತರಿದ್ದರೆ, 1,05,554 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಭಾರತದ ಕೊರೊನಾ ವಿರುದ್ಧದ ಹೋರಾಟವನ್ನು ಮತ್ತೆ ಜನರಿಗೆ ನೆನಪಿಸಿ, ತಮ್ಮ ಪ್ರಾಣ ಪಣಕ್ಕಿಟ್ಟು ಇತರ ಜೀವಗಳನ್ನು ಉಳಿಸಿದ ಕೋವಿಡ್​ ವಾರಿಯರ್​ಗಳ ಪಾತ್ರವನ್ನು ಶ್ಲಾಘಿಸಿದ್ದಾರೆ.

ಜಗತ್ತಿನ ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಕೊರೊನಾಪೀಡಿತ ಹತ್ತು ರಾಷ್ಟ್ರಗಳ ಪಟ್ಟಿ

ABOUT THE AUTHOR

...view details