ಹೈದರಾಬಾದ್: ಪ್ರಪಂಚದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಚೇತರಿಕೆ ಪ್ರಮಾಣದಲ್ಲಿ ಏರಿಕೆ ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿರುವುದು ತುಸು ಸಮಾಧಾನದ ವಿಚಾರವಾಗಿದೆ. ಆದರೆ "ಎಲ್ಲರೂ ಸೋಂಕಿನಿಂದ ಪಾರಾಗುವವರೆಗೂ ಯಾರೊಬ್ಬರೂ ಸುರಕ್ಷಿತರಲ್ಲ " ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
ವಿಶ್ವದಾದ್ಯಂತ ಬರೋಬ್ಬರಿ 3,44,79,555 ಜನರಿಗೆ ಕಿಲ್ಲರ್ ಕೊರೊನಾ ವೈರಸ್ ಅಂಟಿದ್ದು, 10,27,653 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 2,56,67,185 ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 74,94,671 ಇದ್ದು, ಮೃತರ ಸಂಖ್ಯೆ 2,12,660ಕ್ಕೆ ಏರಿಕೆಯಾಗಿದೆ.
ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 63,91,960 ಹಾಗೂ ಮೃತರ ಸಂಖ್ಯೆ 99,804ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 48,49,229 ಪ್ರಕರಣಗಳು ಹಾಗೂ 1,44,767 ಸಾವುಗಳು ವರದಿಯಾಗಿದೆ.
4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 11,85,231 ಕೇಸ್ಗಳಿದ್ದು, 20,891 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಗ್ಲೋಬಲ್ ಕೋವಿಡ್ 19 ಟ್ರ್ಯಾಕರ್