ಕರ್ನಾಟಕ

karnataka

By

Published : Sep 22, 2020, 5:59 PM IST

ETV Bharat / bharat

ಕೊರೊನಾ​ ಸಾವು-ನೋವಿನಲ್ಲಿ ಅಮೆರಿಕ ಫಸ್ಟ್.. ಚೇತರಿಕೆಯ ಪ್ರಮಾಣದಲ್ಲಿ ಭಾರತ ಬೆಸ್ಟ್​​

ಪ್ರಪಂಚದಾದ್ಯಂತ 2.3 ಕೋಟಿ ಜನರು ಕೋವಿಡ್​ನಿಂದ ಗುಣಮುಖರಾಗಿದ್ದು, ಇದರಲ್ಲಿ ಭಾರತದಲ್ಲೇ ಶೇ.19 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಜಾಗತಿಕ ಕೋವಿಡ್​ ರಿಕವರಿ ರೇಟ್​ನಲ್ಲಿ ಭಾರತ ಅಗ್ರಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನಗಳಲ್ಲಿ ಅಮೆರಿಕ ಹಾಗೂ ಬ್ರೆಜಿಲ್ ಇದೆ..

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಹೈದರಾಬಾದ್​:ಭೂಮಂಡಲದಲ್ಲಿ ಬರೋಬ್ಬರಿ 3,14,82,599 ಜನರಿಗೆ ಕೋವಿಡ್​ ಸೋಂಕು​ ಅಂಟಿದೆ. 9,69,298 ರೋಗಿಗಳು ಮೃತಪಟ್ಟಿದ್ದಾರೆ. ಆದರೆ, ಸೋಂಕಿತರ ಪೈಕಿ 2.3 ಕೋಟಿಮಂದಿ ಗುಣಮುಖರಾಗಿದ್ದಾರೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 70,46,216 ಇದ್ದು, ಮೃತರ ಸಂಖ್ಯೆ 2,04,506ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಕೇಸ್​ಗಳ ಸಂಖ್ಯೆ 55,60,105 ಹಾಗೂ ಸಾವಿನ ಸಂಖ್ಯೆ 88,965ಕ್ಕೆ ಏರಿಕೆಯಾಗಿದೆ. ಆದರೆ, ಚೇತರಿಕೆಯ ಪ್ರಮಾಣದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.

ಪ್ರಪಂಚದಾದ್ಯಂತ 2.3 ಕೋಟಿ ಜನರು ಕೋವಿಡ್​ನಿಂದ ಗುಣಮುಖರಾಗಿದ್ದು, ಇದರಲ್ಲಿ ಭಾರತದಲ್ಲೇ ಶೇ.19 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಜಾಗತಿಕ ಕೋವಿಡ್​ ರಿಕವರಿ ರೇಟ್​ನಲ್ಲಿ ಭಾರತ ಅಗ್ರಸ್ಥಾನ ಪಡೆದುಕೊಂಡಿದೆ. ಶೇ.18.70 ಪ್ರಮಾಣದೊಂದಿಗೆ ಎರಡನೇ ಸ್ಥಾನದಲ್ಲಿ ಅಮೆರಿಕ ಇದ್ದು, ಶೇ.16.90 ಪ್ರಮಾಣದೊಂದಿಗೆ ಬ್ರೆಜಿಲ್​ ಜಾಗತಿಕ ಕೊರೊನಾ ಗುಣಮುಖರ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ.

ಕೋವಿಡ್​ ಪೀಡಿತ ಜಗತ್ತಿನ ಮೂರನೇ ರಾಷ್ಟ್ರವಾದ ಬ್ರೆಜಿಲ್​​ನಲ್ಲಿ 45,60,083 ಪ್ರಕರಣ ಹಾಗೂ 1,37,350 ಸಾವು ವರದಿಯಾಗಿವೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 11,09,595 ಕೇಸ್​​ಗಳಿವೆ. 19,489 ಜನ ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,297 ಪ್ರಕರಣ ಹಾಗೂ 4,634 ಸಾವು ವರದಿಯಾಗಿವೆ.

ABOUT THE AUTHOR

...view details