ಕರ್ನಾಟಕ

karnataka

ETV Bharat / bharat

ವಿಶ್ವದಲ್ಲಿ ಕೊರೊನಾರ್ಭಟ: ಮಹಾಮಾರಿ ಬಲೆಯಲ್ಲಿ 2.90 ಕೋಟಿ ಜನರು

ಕೊರೊನಾ​ ಪೀಡಿತ ರಾಷ್ಟ್ರಗಳ ಪೈಕಿ ಮೊದಲ ಸ್ಥಾನ ಕಾಯ್ದಿರಿಸಿಕೊಂಡಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 67,08,458 ಇದ್ದು, ಮೃತರ ಸಂಖ್ಯೆ 1,98,520ಕ್ಕೆ ಏರಿಕೆಯಾಗಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

By

Published : Sep 14, 2020, 4:58 PM IST

ಹೈದರಾಬಾದ್​: ಜಗದಗಲ 2,91,88,438 ಜನರು ಮಹಾಮಾರಿ ಕೊರೊನಾ ಬಲೆಯಲ್ಲಿ ಸಿಲುಕಿದ್ದು, 9,28,325 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 2,10,31,679 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 67,08,458 ಇದ್ದು, ಮೃತರ ಸಂಖ್ಯೆ 1,98,520ಕ್ಕೆ ಏರಿಕೆಯಾಗಿದೆ.

ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 48,46,427 ಹಾಗೂ ಮೃತರ ಸಂಖ್ಯೆ 79,754ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 43,30,455 ಪ್ರಕರಣಗಳು ಹಾಗೂ 1,31,663 ಸಾವುಗಳು ವರದಿಯಾಗಿವೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 10,62,811 ಕೇಸ್​​ಗಳಿದ್ದು, 18,578 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,194 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ABOUT THE AUTHOR

...view details