ಕರ್ನಾಟಕ

karnataka

ETV Bharat / bharat

ಜಗತ್ತಿನಲ್ಲಿ ಕೊರೊನಾ ರಣಕೇಕೆ: ಅಮೆರಿಕದಲ್ಲಿ 2 ಲಕ್ಷ ಗಡಿಯತ್ತ ಮೃತರ ಸಂಖ್ಯೆ

ಕೋವಿಡ್​ ಕೇಸ್​ಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 66,76,601 ಇದ್ದು, ಮೃತರ ಸಂಖ್ಯೆ 1,98,128ಕ್ಕೆ ಏರಿಕೆಯಾಗಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

By

Published : Sep 13, 2020, 4:11 PM IST

ಹೈದರಾಬಾದ್​:ವಿಶ್ವದಾದ್ಯಂತ ಬರೋಬ್ಬರಿ 2,89,46,628 ಜನರಿಗೆ ಕಿಲ್ಲರ್​ ಕೊರೊನಾ ವೈರಸ್​ ಅಂಟಿದ್ದು, 9,24,610 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ ಎರಡು ಕೋಟಿಗೂ ಹೆಚ್ಚು (2,08,13,150) ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 66,76,601 ಇದ್ದು, ಮೃತರ ಸಂಖ್ಯೆ 1,98,128ಕ್ಕೆ ಏರಿಕೆಯಾಗಿದೆ.

ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 47,54,356 ಹಾಗೂ ಮೃತರ ಸಂಖ್ಯೆ 78,614ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 43,15,858 ಪ್ರಕರಣಗಳು ಹಾಗೂ 1,31,274 ಸಾವುಗಳು ವರದಿಯಾಗಿದೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 10,57,362 ಕೇಸ್​​ಗಳಿದ್ದು, 18,484 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,184 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ABOUT THE AUTHOR

...view details