ಕರ್ನಾಟಕ

karnataka

By

Published : Sep 5, 2020, 5:24 PM IST

ETV Bharat / bharat

ಬ್ರೆಜಿಲ್​​ನಲ್ಲಿ 40.9 ಲಕ್ಷ, ಭಾರತದಲ್ಲಿ 40.2 ಲಕ್ಷ ಕೋವಿಡ್​ ಕೇಸ್​​... 2ನೇ ಸ್ಥಾನದ ಸನಿಹಕ್ಕೆ ಇಂಡಿಯಾ!

ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಪೈಕಿ ಅಮೆರಿಕ, ಬ್ರೆಜಿಲ್​​ ಹಾಗೂ ಭಾರತ ಮುಂಚೂಣಿಯಲ್ಲಿವೆ. ದೇಶದಲ್ಲಿ ಇದೇ ರೀತಿ ಕೊರೊನಾರ್ಭಟ ಮುಂದುವರೆದರೆ ಬ್ರೆಜಿಲ್​ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಲಿದೆ.

Global COVID-19 tracker
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಹೈದರಾಬಾದ್​:ಕಿಲ್ಲರ್​ ಕೊರೊನಾಗೆ ವಿಶ್ವದಾದ್ಯಂತ 8,78,083 ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗೆ 2,67,73,497 ಜನರಿಗೆ ವೈರಸ್​ ಅಂಟಿದ್ದು, 1,88,80,514 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 63,89,057 ಇದ್ದು, ಮೃತರ ಸಂಖ್ಯೆ 1,92,111ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 40,91,801 ಪ್ರಕರಣಗಳು ಹಾಗೂ 1,25,584 ಸಾವುಗಳು ವರದಿಯಾಗಿವೆ.

ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 40,20,239 ಸೋಂಕಿತರು ಪತ್ತೆಯಾಗಿದ್ದು, ಈವರೆಗೆ 69,635 ಮಂದಿ ಮೃತಪಟ್ಟಿದ್ದಾರೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 10,15,105 ಕೇಸ್​​ಗಳಿದ್ದು, 17,649 ಜನರು ಸಾವನ್ನಪ್ಪಿದ್ದಾರೆ.

ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟ ಮೊದಲು ಕಾಣಿಸಿಕೊಂಡು, ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಮತ್ತೆ ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,112 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ABOUT THE AUTHOR

...view details