ಹೈದರಾಬಾದ್:ಕೋವಿಡ್ ಕಪಿಮುಷ್ಠಿಯಲ್ಲಿ ವಿಶ್ವದ ಬರೋಬ್ಬರಿ 2,02,37,888 ಜನರು ಸಿಲುಕಿದ್ದು, 7,37,866 ಮಂದಿ ಮೃತಪಟ್ಟಿದ್ದಾರೆ. ಆದರೆ 2 ಕೋಟಿ ಸೋಂಕಿತರ ಪೈಕಿ ಒಂದು ಕೋಟಿ 31 ಲಕ್ಷ ಜನರು (1,31,00,237) ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅಮೆರಿಕ, ಬ್ರೆಜಿಲ್ ಮತ್ತು ಭಾರತದಲ್ಲೇ ಮೂರನೇ ಎರಡರಷ್ಟು ಕೋವಿಡ್ ಪ್ರಕರಣಗಳಿವೆ. ಶೇ. 40ರಷ್ಟು ಸೋಂಕಿತರಿಗೆ ರೋಗ ಲಕ್ಷಣಗಳೇ ಇಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 52,50,766 ಇದ್ದು, ಮೃತರ ಸಂಖ್ಯೆ 1,66,163ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 30,57,470 ಪ್ರಕರಣಗಳು ಹಾಗೂ 1,01,857 ಸಾವುಗಳು ವರದಿಯಾಗಿವೆ.