ಪ್ರಪಂಚದಾದ್ಯಂತ ಇರುವ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಪ್ರವಾಸೋದ್ಯಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. 1997 ರಿಂದ ಆಚರಣೆಯಲ್ಲಿರುವ ಈ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟೆಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು.
ವಿಶ್ವ ಪ್ರವಾಸೋದ್ಯಮ ದಿನದ ಉದ್ದೇಶ ಎಂದರೆ ಈ ದಿನವು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯದ ಮೇಲೆ ಪ್ರವಾಸೋದ್ಯಮವು ಯಾವ ರೀತಿ ಪರಿಣಾಮ ಬೀರುವುದು ಎಂದು ಸಾರ್ವಜನಿಕರಿಗೆ ತಿಳಿಸಿಕೊಡುವುದಾಗಿದೆ. ಕೋವಿಡ್-19 ರೋಗವು ಈ ಕ್ಷೇತ್ರದ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಪ್ರವಾಸೋದ್ಯಮವು ಅಂತಿಮವಾಗಿ ಸಾಂಕ್ರಾಮಿಕ ರೋಗವನ್ನು ಮೀರಿ, ಜನರನ್ನು ಒಟ್ಟುಗೂಡಿಸುವ ಮೂಲಕ ನಂಬಿಕೆ ಹುಟ್ಟುಹಾಕಲು ಸಹಾಯ ಮಾಡುತ್ತದೆ.
ಪ್ರವಾಸೋದ್ಯಮದಿಂದ ಸಾರಿಗೆ, ಹೋಟೆಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ. ವಿಶ್ವ ಪ್ರವಾಸೋದ್ಯಮ ದಿನವನ್ನು ವಿವಿಧ ವಿಧಾನಗಳಿಂದ ಆಚರಣೆ ಮಾಡಲಾಗುತ್ತದೆ. ಅಮ್ಯೂಸ್ಮೆಂಟ್ ಪಾರ್ಕ್, ಮ್ಯೂಸಿಯಂ ಮತ್ತು ಇತರ ಕೆಲವೊಂದು ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗಳನ್ನು ಸೆಳೆಯುವುದು ಮತ್ತು ಈ ದಿನದಂದು ಉಚಿತ ಅಥವಾ ರಿಯಾಯಿತಿ ದರದಲ್ಲಿ ಪ್ರವೇಶ ನೀಡುವುದು ಇದೆ.
ವಿಶ್ವ ಪ್ರವಾಸೋದ್ಯಮ ದಿನದ 40 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ, 2020ರಲ್ಲಿ ಈ ದಿನವನ್ನು ಕೇವಲ ಯುಎನ್‌ಡಬ್ಲ್ಯೂಟಿಒ ಸದಸ್ಯ ರಾಷ್ಟ್ರಗಳು ಅಲ್ಲದೇ ಎಲ್ಲ ದೇಶಗಳು ಆಚರಿಸುತ್ತಿವೆ. ಮರ್ಕೊಸೂರ್ ರಾಷ್ಟ್ರಗಳಾದ ಅರ್ಜೆಂಟೀನಾ, ಬ್ರೆಜಿಲ್, ಪರಾಗ್ವೆ, ಉರುಗ್ವೆ, ಮತ್ತು ಚಿಲಿ ದೇಶಗಳು ಆಚರಿಸುತ್ತಿದ್ದು, ಇವು ಗಡಿಯಾಚೆಗೂ ಸಹಕಾರ ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಅಗತ್ಯವನ್ನು ಪ್ರತಿಬಿಂಬಿಸುತ್ತವೆ.
ಇತಿಹಾಸ:ಮೆಕ್ಸಿಕೊ ನಗರದಲ್ಲಿ ಸೆಪ್ಟೆಂಬರ್ 27, 1970 ರಂದು ಇಂಟರ್ನ್ಯಾಷನಲ್ ಯೂನಿಯನ್ ಆಫ್ ಅಫೀಶಿಯಲ್ ಟ್ರಾವೆಲ್ ಆರ್ಗನೈಸೇಶನ್ (ಐಯುಒಟಿಒ) ವಿಶೇಷ ಸಭೆ ನಡೆಸಿ, ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಪ್ರತಿಮೆಗಳನ್ನು ಅಂಗೀಕರಿಸಿತು. ನಂತರ, ಯುಎನ್‌ಡಬ್ಲ್ಯೂಟಿಒ 1979 ರ ಸೆಪ್ಟೆಂಬರ್ ಅಂತ್ಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ನಿರ್ಧರಿಸಿತು. ಮೊದಲ ಬಾರಿಗೆ ಇದನ್ನು ಸೆಪ್ಟೆಂಬರ್ 27, 1980 ರಂದು ಆಚರಿಸಲಾಯಿತು.
ಸೆ.27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಯ್ಕೆ ಮಾಡಲು ಕಾರಣ ಏನು?
ಈ ದಿನವನ್ನು ವಿಶ್ವ ಪ್ರವಾಸೋದ್ಯಮದ ಪ್ರಮುಖ ಮೈಲಿಗಲ್ಲು ಎನ್ನಬಹುದು. ಏಕೆಂದರೆ 1970 ಸೆಪ್ಟೆಂಬರ್ 27 ರಂದು ಯುಎನ್‌ಡಬ್ಲ್ಯೂಟಿಒ ಅನ್ನು ಅಂಗೀಕರಿಸಲಾಯಿತು. ಇದರ ವಾರ್ಷಿಕೋತ್ಸವದ ಪ್ರಯುಕ್ತ ಈ ದಿನವನ್ನು ಆಚರಿಸಲಾಗುತ್ತಿದೆ. ಯುಎನ್‌ಡಬ್ಲ್ಯೂಟಿಒ ಪ್ರಕಾರ, ಈ ದಿನ ವಿಶ್ವ ಪ್ರವಾಸೋದ್ಯಮ ದಿನಕ್ಕೆ ಸೂಕ್ತವಾಗಿದೆ. ಏಕೆಂದರೆ ಉತ್ತರ ಗೋಳಾರ್ಧದಲ್ಲಿ ಈ ವೇಳೆ ಪ್ರವಾಸೋದ್ಯಮಕ್ಕೆ ಸರಿಯಾದ ಸಮಯವಾಗಿದೆ. ದಕ್ಷಿಣ ಗೋಳಾರ್ಧದಲ್ಲಿ ಪ್ರವಾಸದ ಸಮಯ ಆರಂಭವಾಗುತ್ತದೆ. ಪ್ರತಿ ವರ್ಷ ವಿಭಿನ್ನ ವಿಷಯದೊಂದಿಗೆ ಈ ದಿನವನ್ನು ಪೂರ್ಣ ಉತ್ಸಾಹದಿಂದ ಆಚರಿಸಲಾಗುತ್ತದೆ.
ನಿಮಗೆ ಗೊತ್ತೆ?:ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ ವಿಶ್ವದಾದ್ಯಂತ ಪ್ರವಾಸಿ ದಟ್ಟಣೆಯಲ್ಲಿ ಶೇ.58 ರಿಂದ ಶೇ.78ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಿದೆ.
ಪ್ರವಾಸೋದ್ಯಮವು ಭೂಮಿಯ ಮೇಲಿನ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಕೆಲಸವನ್ನು ನೀಡುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ 100-120 ಮಿಲಿಯನ್ ಪ್ರವಾಸೋದ್ಯಮದ ಉದ್ಯೋಗಗಳು ಅಪಾಯದಲ್ಲಿವೆ.
ಗ್ರಾಮೀಣ ಸಮುದಾಯದ ಯುವಕರು ನಿರುದ್ಯೋಗಿಗಳಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಿದೆ. ಪ್ರವಾಸೋದ್ಯಮವು ಒಂದು ಜೀವಸೆಲೆಯಾಗಿದ್ದು, ಯುವಜನರಿಗೆ ವಲಸೆ ಹೋಗದೆ ಜೀವನವನ್ನು ಕಟ್ಟಿಕೊಳ್ಳಲು ಅವಕಾಶವನ್ನು ನೀಡುತ್ತದೆ.
ಕಾರ್ಮಿಕ- ವಸತಿ ಮತ್ತು ಆಹಾರ ಸೇವೆಗಳ ಉಪವಿಭಾಗಗಳು ವಿಶ್ವದಾದ್ಯಂತ 144 ಮಿಲಿಯನ್ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುತ್ತವೆ.
ಪ್ರವಾಸೋದ್ಯಮ ಉದ್ಯಮದಲ್ಲಿ ಬಹುಪಾಲು 50 ಕ್ಕಿಂತ ಕಡಿಮೆ ಉದ್ಯೋಗಿಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಾಗಿದ್ದಾರೆ.
ಭಾರತದ ಪ್ರವಾಸೋದ್ಯಮ ಕುರಿತ ಒಂದು ನೋಟ:
ವಿಶ್ವ ಆರ್ಥಿಕ ವೇದಿಕೆಯ ಪ್ರವಾಸ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ (ಟಿಟಿಸಿಐ) 2019 ರಲ್ಲಿ ಭಾರತ 34ನೇ (140 ದೇಶಗಳಲ್ಲಿ) ಸ್ಥಾನ ಪಡೆದಿದೆ.