ಕರ್ನಾಟಕ

karnataka

ETV Bharat / bharat

ವಿಶ್ವ ನಿರಾಶ್ರಿತರ ದಿನ; ನಿರಾಶ್ರಿತರ ಸಮಸ್ಯೆ ಪರಿಹಾರಕ್ಕೆ ಬೇಕಿದೆ ರಾಜಕೀಯ ಇಚ್ಛಾಶಕ್ತಿ! - ಸಿರಿಯಾ

ಎಲ್ಲರನ್ನೂ ಒಳಗೊಂಡ ಸಮಾನತೆಯ ಜಗತ್ತನ್ನು ನಿರ್ಮಾಣ ಮಾಡುವುದು ಹಾಗೂ ಯಾರೊಬ್ಬರೂ ಮುಖ್ಯವಾಹಿನಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ಚಿಕ್ಕ ಕೆಲಸದಿಂದಲೂ ಒಂದಿಲ್ಲೊಂದು ರೀತಿ ಬದಲಾವಣೆ ತರಬಲ್ಲರು. ಹೀಗಾಗಿ ನಿರಾಶ್ರಿತರರಿಗಾಗಿ ಎಲ್ಲರೂ ತಮ್ಮ ಕೈಲಾದುದನ್ನು ಮಾಡಿದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಬಹುದು.

World Refugee Day
World Refugee Day

By

Published : Jun 20, 2020, 4:32 PM IST

ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ನಿರಾಶ್ರಿತರ ಹೈಕಮೀಷನರ್ ವರದಿಯ ಪ್ರಕಾರ, ವಿಶ್ವದಲ್ಲಿ ಸುಮಾರು 70 ಮಿಲಿಯನ್​ಗೂ ಅಧಿಕ ಜನ ಯುದ್ಧ, ದೌರ್ಜನ್ಯ, ಭಯೋತ್ಪಾದನೆ ಅಥವಾ ನೈಸರ್ಗಿಕ ವಿಪತ್ತುಗಳ ಕಾರಣದಿಂದ ತಮ್ಮ ಮನೆಗಳನ್ನು ತೊರೆದಿದ್ದಾರೆ ಅಥವಾ ಕಳೆದುಕೊಂಡಿದ್ದಾರೆ. 2018 ರಲ್ಲಿ ಪ್ರತಿ ನಿಮಿಷಕ್ಕೆ ವಿಶ್ವದಲ್ಲಿ 25 ಜನ ನಿರಾಶ್ರಿತರಾಗುತ್ತಿದ್ದರು ಎಂದು ವರದಿಯಲ್ಲಿ ಹೇಳಿದೆ. ಜಗತ್ತಿನಲ್ಲಿ ನಿರಾಶ್ರಿತರ ಸಮಸ್ಯೆ ಎಷ್ಟು ತೀವ್ರವಾಗಿ ಕಾಡುತ್ತಿದೆ ಎಂಬುದು ನಮಗೆ ಇದರಿಂದ ಅರ್ಥವಾಗುತ್ತದೆ.

ಪ್ರತಿವರ್ಷದ ಜೂನ್ 20 ರಂದು ಜಗತ್ತಿನಾದ್ಯಂತ ವಿಶ್ವ ನಿರಾಶ್ರಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನಲ್ಲಿರುವ ನಿರಾಶ್ರಿತರ ಸ್ಥಿತಿಯನ್ನು ಅರಿಯಲು ಹಾಗೂ ಅವರ ಪರಿಸ್ಥಿತಿ ಸುಧಾರಿಸಲು ಮಾಡಲಾಗುತ್ತಿರುವ ಯತ್ನಗಳ ಕುರಿತು ಚಿಂತನೆ ನಡೆಸಲು ಈ ದಿನ ಆಚರಿಸಲಾಗುತ್ತದೆ. ಈ ದಿನಾಚರಣೆಯು ನಿರಾಶ್ರಿತರ ಹಕ್ಕುಗಳು, ಅಗತ್ಯಗಳು ಹಾಗೂ ಅವರ ಕನಸುಗಳ ಕುರಿತಾಗಿ ಬೆಳಕು ಚೆಲ್ಲುತ್ತದೆ. ನಿರಾಶ್ರಿತರ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಇಚ್ಛಾಶಕ್ತಿ ಬೆಳೆಸುವುದು ಹಾಗೂ ಅವರೂ ಸಹ ಇತರರಂತೆ ಬಾಳಲು ಸಾಧ್ಯವಾಗುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ.

ವಿಶ್ವ ನಿರಾಶ್ರಿತರ ದಿನದ ಇತಿಹಾಸ

ಜೂನ್ 20, 2001 ರಂದು ಪ್ರಥಮ ಬಾರಿಗೆ ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಯಿತು. ನಿರಾಶ್ರಿತರ ಸ್ಥಿತಿಗತಿ ಕುರಿತು ಪ್ರಥಮ ಬಾರಿಗೆ 1951 ರಲ್ಲಿ ನಡೆದ ಸಮಾವೇಶದ 50ನೇ ವರ್ಷಾಚರಣೆಯ ದಿನದಿಂದ ವಿಶ್ವ ನಿರಾಶ್ರಿತರ ದಿನ ಆಚರಿಸಲು ಆರಂಭಿಸಲಾಯಿತು.

ಪ್ರತಿಯೊಂದು ಸೇವೆಗೂ ಬೆಲೆಯಿದೆ -ಈ ಬಾರಿಯ ಘೋಷವಾಕ್ಯ

ಎಲ್ಲರನ್ನೂ ಒಳಗೊಂಡ ಸಮಾನತೆಯ ಜಗತ್ತನ್ನು ನಿರ್ಮಾಣ ಮಾಡುವುದು ಹಾಗೂ ಯಾರೊಬ್ಬರೂ ಮುಖ್ಯವಾಹಿನಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ಚಿಕ್ಕ ಕೆಲಸದಿಂದಲೂ ಒಂದಿಲ್ಲೊಂದು ರೀತಿ ಬದಲಾವಣೆ ತರಬಲ್ಲರು. ಹೀಗಾಗಿ ನಿರಾಶ್ರಿತರರಿಗಾಗಿ ಎಲ್ಲರೂ ತಮ್ಮ ಕೈಲಾದುದನ್ನು ಮಾಡಿದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಬಹುದು.

ಜಗತ್ತಿನ ನಿರಾಶ್ರಿತರ ಅಂಕಿ ಸಂಖ್ಯೆ

- ಯುದ್ಧ, ದೌರ್ಜನ್ಯ ಅಥವಾ ಭಯೋತ್ಪಾದನೆಯಿಂದ ಪಾರಾಗಲು ಪ್ರತಿ ನಿಮಿಷ 20 ಜನ ತಮ್ಮ ಮನೆಗಳನ್ನು ತೊರೆಯುತ್ತಾರೆ.

- 79.5 ಮಿಲಿಯನ್ ಜನರನ್ನು ಬಲವಂತವಾಗಿ ಅವರ ಮನೆಗಳಿಂದ ಹೊರಹಾಕಲಾಗಿದೆ ಹಾಗೂ ಇದರಲ್ಲಿ 30-34 ಮಿಲಿಯನ್ ನಿರಾಶ್ರಿತರು 18 ವರ್ಷಕ್ಕೂ ಕೆಳಗಿನವರಾಗಿದ್ದಾರೆ.

- ಜಗತ್ತಿನ ಶೇ 1 ರಷ್ಟು ಜನಸಂಖ್ಯೆ ಸ್ಥಾನಪಲ್ಲಟಗೊಂಡಿದೆ.

- ಶೇ 73 ರಷ್ಟು ಸ್ಥಾನಪಲ್ಲಟಗೊಂಡ ಜನ ನೆರೆಯ ದೇಶಗಳಲ್ಲಿ ವಾಸಿಸುತ್ತಾರೆ.

- ಅತಿ ಹೆಚ್ಚು ಆಹಾರ ಅಭದ್ರತೆ ಹಾಗೂ ಅಪೌಷ್ಟಿಕಾಂಶ ಹೆಚ್ಚಾಗಿರುವ ದೇಶಗಳಲ್ಲೇ ಜಗತ್ತಿನ ಒಟ್ಟಾರೆ ಸ್ಥಾನಪಲ್ಲಟಗೊಂಡವರ ಸಂಖ್ಯೆಯ ಶೇ 80 ರಷ್ಟು ಜನ ವಾಸಿಸುತ್ತಾರೆ.

- ಜಗತ್ತಿನ ಶೇ 68 ರಷ್ಟು ಸ್ಥಳಾಂತಗೊಂಡ ಜನತೆ ಸಿರಿಯಾ, ವೆನೆಜುವೆಲಾ, ಅಫ್ಘಾನಿಸ್ತಾನ್, ದಕ್ಷಿಣ ಸೂಡಾನ್ ಹಾಗೂ ಮೈನ್ಮಾರ್ ಇವೇ ಐದು ದೇಶಗಳಿಂದ ಬಂದವರಾಗಿದ್ದಾರೆ.

- ವಿಶ್ವದಲ್ಲಿ ಯಾವುದೇ ರಾಷ್ಟ್ರಕ್ಕೆ ಸೇರದ 4.2 ಮಿಲಿಯನ್ ಜನರಿದ್ದಾರೆ.

- 4.2 ಮಿಲಿಯನ್ ಜನರು ವಿವಿಧ ರಾಷ್ಟ್ರಗಳಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದಾರೆ.

- 2019 ರಲ್ಲಿ 1,07,800 ಜನ 26 ದೇಶಗಳಲ್ಲಿ ಮರುಸ್ಥಾಪಿತಗೊಂಡಿದ್ದಾರೆ.

- ಸುಮಾರು 45.7 ಮಿಲಿಯನ್​ನಷ್ಟು ಜನತೆ ತಮ್ಮ ದೇಶದೊಳಗಡೆಯೇ ನಿರಾಶ್ರಿತರಾಗಿದ್ದಾರೆ.

- ಶೇ 70 ಕ್ಕೂ ಹೆಚ್ಚಿನ ನಿರಾಶ್ರಿತ ಕುಟುಂಬಗಳು ಬಡತನ ರೇಖೆಯ ಕೆಳಗೆ ವಾಸಿಸುತ್ತವೆ.

ಅತಿ ಹೆಚ್ಚು ಬಾಧೆಗೊಳಗಾದ ದೇಶಗಳು

- ಸಿರಿಯಾ: 6.6 ಮಿಲಿಯನ್

- ವೆನೆಜುವೆಲಾ: 4.4 ಮಿಲಿಯನ್

- ಅಫ್ಘಾನಿಸ್ತಾನ್: 3 ಮಿಲಿಯನ್

- ದಕ್ಷಿಣ ಸೂಡಾನ್: 2.2 ಮಿಲಿಯನ್

- ಮೈನ್ಮಾರ: 1.1 ಮಿಲಿಯನ್

- ಸೋಮಾಲಿಯಾ: 0.9 ಮಿಲಿಯನ್

- ಕಾಂಗೊ: 0.8 ಮಿಲಿಯನ್

- ಸೂಡಾನ್: 0.7 ಮಿಲಿಯನ್

- ಇರಾಕ್: 0.6 ಮಿಲಿಯನ್

- ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್: 0.6 ಮಿಲಿಯನ್

ಭಾರತದಲ್ಲಿರುವ ನಿರಾಶ್ರಿತರು

2017ರ ಯುಎನ್​ಎಚ್​ಸಿಅರ್ ವರದಿಯ ಪ್ರಕಾರ ಭಾರತ 2 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಈ ನಿರಾಶ್ರಿತರು ಮೈನ್ಮಾರ್, ಅಫ್ಘಾನಿಸ್ತಾನ್, ಸೋಮಾಲಿಯಾ, ಟಿಬೆಟ್, ಶ್ರೀಲಂಕಾ, ಪಾಕಿಸ್ತಾನ, ಪ್ಯಾಲೆಸ್ಟೈನ್, ಬರ್ಮಾ ಮುಂತಾದ ದೇಶಗಳಿಂದ ಬಂದವರಾಗಿದ್ದಾರೆ. ನಿರಾಶ್ರಿತರನ್ನು ಅತ್ಯಂತ ಚೆನ್ನಾಗಿ ನೋಡಿಕೊಳ್ಳುತ್ತಿರುವ ಭಾರತದ ಕ್ರಮಕ್ಕೆ ಜಗತ್ತಿನೆಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ABOUT THE AUTHOR

...view details