ಕರ್ನಾಟಕ

karnataka

ETV Bharat / bharat

ಸ್ವಾತಂತ್ರ್ಯ ದಿನಕ್ಕೆ ಜಾಗತಿಕ ನಾಯಕರಿಂದ ಹರಿದು ಬಂದು ಶುಭಾಶಯಗಳ ಮಹಾಪೂರ

ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಆಳವಾದ ಸ್ನೇಹ ಮತ್ತು ಪಾಲುದಾರಿಕೆಯನ್ನು ಭರೋಸಾ (ನಂಬಿಕೆ), ಸಮ್ಮಾನ್ (ಗೌರವ) ಮತ್ತು ಹಂಚಿಕೆಯ ಮೌಲ್ಯಗಳ ಮೇಲೆ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಸ್ಕಾಟ್​ ಮಾರಿಸ್​ ಶುಭ ಕೋರಿದರು.

Modi
ಮೋದಿ

By

Published : Aug 15, 2020, 7:10 PM IST

ನವದೆಹಲಿ:ಭಾರತವು ಇಂದು ತನ್ನ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ದೇಶದ ಪ್ರಜಾಪ್ರಭುತ್ವವನ್ನು ಶ್ಲಾಘಿಸಿ ಶುಭಕೋರಿವೆ.

ಭಾರತ ಮತ್ತು ಅಮೆರಿಕ ದೇಶಗಳು ಪ್ರಜಾಪ್ರಭುತ್ವ ಸಂಪ್ರದಾಯ ಮತ್ತು ನಿಕಟ ಸ್ನೇಹ ಸಂಬಂಧಗಳನ್ನು ಹೊಂದಿವೆ. ಭಾರತ ಸ್ವಾತಂತ್ರ್ಯಪಡೆದ ದಿನದಿಂದಲೂ ಅಮೆರಿಕದ ಜತೆ ಸ್ನೇಹ ಹೊಂದಿದೆ. ಈ ಸಂಬಂಧವು ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವಾಗಿ ಬೆಳೆದಿದೆ. ಉಭಯ ರಾಷ್ಟ್ರಗಳು 21ನೇ ಶತಮಾನದಲ್ಲಿ ಜಾಗತಿಕ ಭದ್ರತೆ ಮತ್ತು ಸಮೃದ್ಧಿಗೆ ಪ್ರಮುಖವಾದ ವಿಷಯಗಳ ಬಗ್ಗೆ ಜಂಟಿಯಾಗಿ ಶ್ರಮಿಸಲಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಭಾರತೀಯರಿಗೆ ಶುಭ ಕೋರಿದರು.

ಭಯೋತ್ಪಾದನೆ ವಿರುದ್ಧದ ಹೋರಾಟ, ರಕ್ಷಣಾ ವ್ಯವಸ್ಥೆ, ವ್ಯಾಪಾರ, ಹೂಡಿಕೆ, ಇಂಧನ, ಪರಿಸರ, ಆರೋಗ್ಯ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಭಾರತ ಮತ್ತು ಅಮೆರಿಕ ದೇಶಗಳು ಜೊತೆಯಾಗಿ ಕೆಲಸ ಮಾಡುತ್ತಿವೆ ಎಂದರು.

ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಆಳವಾದ ಸ್ನೇಹ ಮತ್ತು ಪಾಲುದಾರಿಕೆಯನ್ನು ಭರೋಸಾ (ನಂಬಿಕೆ), ಸಮ್ಮಾನ್ (ಗೌರವ) ಮತ್ತು ಹಂಚಿಕೆಯ ಮೌಲ್ಯಗಳ ಮೇಲೆ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಸ್ಕಾಟ್​ ಮಾರಿಸನ್‌​ ಶುಭ ಕೋರಿದರು.

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ರಷ್ಯಾ ಒಕ್ಕೂಟ ಅಧ್ಯಕ್ಷರ ಪರವಾಗಿ ಶುಭಾಶಯ ಎಂದು ಭಾರತದಲ್ಲಿರುವ ರಷ್ಯಾ ರಾಯಭಾರಿ ಸಂದೇಶದಲ್ಲಿ ತಿಳಿಸಿದ್ದಾರೆ.

ಚೀನಾ ರಾಯಭಾರಿ ಸುನ್​ ವಿಂಗ್​ವಾಂಗ್ ಅವರು, 2020ರ ಸ್ವಾತಂತ್ರ್ಯ ಭಾರತದ ಜನತೆಗೆ ಹಾಗೂ ಸರ್ಕಾರಕ್ಕೂ ಅಭಿನಂದನೆ. ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ನಾಗರಿಕತೆ ಕಾಲದಿಂದಲೂ ಶಾಂತಿ ಸಹಭಾಳ್ವೆಯಿಂದ ಸಾಗುತ್ತಿವೆ ಎಂದು ಹೇಳಿದ್ದಾರೆ.

ನೇಪಾಳ, ಶ್ರೀಲಂಕಾ, ಇಸ್ರೇಲ್, ಭೂತಾನ್​, ಅಫ್ಘಾನ್​, ಆಸ್ಟ್ರೇಲಿಯಾ ಸೇರಿದಂತೆ ಇತರೆ ರಾಷ್ಟ್ರಗಳ ನಾಯಕರು ಶುಭ ಕೋರಿದ್ದಾರೆ.

ABOUT THE AUTHOR

...view details