ಕರ್ನಾಟಕ

karnataka

ETV Bharat / bharat

ಇಂದು ವಿಶ್ವ ರೋಗನಿರೋಧಕ ದಿನ.. ಈ ದಿನದ ಮಹತ್ವ ಹೀಗಿದೆ.. - november 10 World Immunization Day

ನಮ್ಮಲ್ಲಿ ಈಗ 20ಕ್ಕೂ ಹೆಚ್ಚು ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಲಸಿಕೆಗಳಿವೆ. ಎಲ್ಲಾ ವಯಸ್ಸಿನ ಜನರು ದೀರ್ಘಕಾಲ, ಆರೋಗ್ಯಕರ ಜೀವನವನ್ನು ನಡೆಸಲು ಇವು ಸಹಾಯ ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ..

ವಿಶ್ವ ರೋಗನಿರೋಧಕ ದಿನ
ವಿಶ್ವ ರೋಗನಿರೋಧಕ ದಿನ

By

Published : Nov 10, 2020, 6:13 PM IST

ನವದೆಹಲಿ : ಇಂದು ವಿಶ್ವ ರೋಗನಿರೋಧಕ ದಿನ. ಪ್ರತಿ ವರ್ಷ ನವೆಂಬರ್ 10ರಂದು ಕೆಲವು ರೋಗಗಳ ವಿರುದ್ಧ ಸಮಯೋಚಿತ ಲಸಿಕೆ ನೀಡುವ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ರೋಗನಿರೋಧಕ ಚುಚ್ಚುಮದ್ದಿನ ಮೂಲಕ ಪೋಲಿಯೊ, ಕಾಲರಾ, ಗರ್ಭಕಂಠದ ಕ್ಯಾನ್ಸರ್ ಮುಂತಾದ ಅನೇಕ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಪ್ರಕಾರ, “ನಮ್ಮಲ್ಲಿ ಈಗ 20ಕ್ಕೂ ಹೆಚ್ಚು ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಲಸಿಕೆಗಳಿವೆ. ಎಲ್ಲಾ ವಯಸ್ಸಿನ ಜನರು ದೀರ್ಘಕಾಲ, ಆರೋಗ್ಯಕರ ಜೀವನವನ್ನು ನಡೆಸಲು ಇವು ಸಹಾಯ ಮಾಡುತ್ತವೆ”.

ರೋಗಗಳು ಇಂತಿವೆ :ಗರ್ಭಕಂಠದ ಕ್ಯಾನ್ಸರ್, ಕಾಲರಾ, ಡಿಫ್ತಿರಿಯಾ, ಹೆಪಟೈಟಿಸ್ ಬಿ, ಇನ್ಫ್ಲುಯೆನ್ಸ್, ಜಪಾನೀಸ್ ಎನ್ಸೆಫಾಲಿಟಿಸ್, ದಡಾರ, ಮೆನಿಂಜೈಟಿಸ್, ಮಂಪ್ಸ್,ಪೆರ್ಟುಸಿಸ್, ನ್ಯುಮೋನಿಯಾ, ಪೋಲಿಯೊ, ರೇಬೀಸ್, ರೋಟವೈರಸ್, ರುಬೆಲ್ಲಾ, ಟೆಟನಸ್,ಟೈಫಾಯಿಡ್, ವರಿಸೆಲ್ಲಾ, ಹಳದಿ ಜ್ವರ ಈ ಎಲ್ಲಾ ಕಾಯಿಲೆಗಳಿಗೆ ಚುಚ್ಚುಮದ್ದನ್ನು ಕಂಡು ಹಿಡಿಯಲಾಗಿದೆ.

ಪ್ರತಿ ವರ್ಷ ಡಿಫ್ತಿರಿಯಾ, ಟೆಟನಸ್, ಪೆರ್ಟುಸಿಸ್, ಇನ್ಫ್ಲುಯೆನ್ಸ್ ಮತ್ತು ದಡಾರದಂತಹ ಕಾಯಿಲೆಗಳಿಂದ ವರ್ಷಕ್ಕೆ 2-3 ದಶಲಕ್ಷ ಜನರು ಸಾಯುವುದನ್ನು ಈ ರೋಗನಿರೋಧಕಗಳು ತಡೆಗಟ್ಟುತ್ತಿವೆ. 2019ರ ಸಮಯದಲ್ಲಿ ವಿಶ್ವಾದ್ಯಂತ ಸುಮಾರು ಶೇ.85ರಷ್ಟು ಶಿಶುಗಳು (116 ಮಿಲಿಯನ್ ಶಿಶುಗಳು) 3 ಡೋಸ್ ಡಿಫ್ತಿರಿಯಾ-ಟೆಟನಸ್-ಪೆರ್ಟುಸಿಸ್ (ಡಿಟಿಪಿ 3) ಲಸಿಕೆಯನ್ನು ಪಡೆದರು. ಮತ್ತೊಂದೆಡೆ 20 ದಶಲಕ್ಷ ಮಕ್ಕಳು ಜೀವ ಉಳಿಸುವ ದಡಾರ, ಡಿಫ್ತಿರಿಯಾ ಮತ್ತು ಟೆಟನಸ್ ಲಸಿಕೆಗಳನ್ನು ತಪ್ಪಿಸಿಕೊಂಡರು”.

ಭಾರತದಲ್ಲಿ ರೋಗನಿರೋಧಕ ಶಕ್ತಿ :ಎನ್‌ಹೆಚ್‌ಪಿ ಭಾರತದ ಪ್ರಕಾರ, “ಲಸಿಕೆಗಳ ಪ್ರಮಾಣ, ಬಳಸಿದ ಫಲಾನುಭವಿಗಳ ಸಂಖ್ಯೆ, ಭೌಗೋಳಿಕ ಹರಡುವಿಕೆ ಮತ್ತು ಮಾನವ ಸಂಪನ್ಮೂಲಗಳ ವಿಷಯದಲ್ಲಿ ಭಾರತವು ವಿಶ್ವದ ಅತಿದೊಡ್ಡ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮಗಳಲ್ಲಿ (ಯುಐಪಿ) ಒಂದು. 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಸಹ, ಯುಐಪಿ ತಮ್ಮ ಜೀವನದ ಮೊದಲ ವರ್ಷದಲ್ಲಿ ಕೇವಲ ಶೇ.65ರಷ್ಟು ಮಕ್ಕಳಿಗೆ ಮಾತ್ರ ಸಂಪೂರ್ಣ ರೋಗನಿರೋಧಕ ಶಕ್ತಿ ನೀಡಲು ಸಮರ್ಥವಾಗಿದೆ.

ಎಲ್ಲಾ ಮಕ್ಕಳಿಗೆ ಸಂಪೂರ್ಣ ರೋಗನಿರೋಧಕ ವ್ಯಾಪ್ತಿಯನ್ನು ಸಾಧಿಸಲು, ಭಾರತ ಸರ್ಕಾರವು ಡಿಸೆಂಬರ್ 2014ರಲ್ಲಿ ಮಿಷನ್ ಇಂದ್ರಧನುಷ್ ಅನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮದ ಅಂತಿಮ ಗುರಿ ಎರಡು ವರ್ಷದ ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಲಭ್ಯವಿರುವ ಎಲ್ಲಾ ಲಸಿಕೆಗಳೊಂದಿಗೆ ಸಂಪೂರ್ಣ ರೋಗನಿರೋಧಕವನ್ನು ನೀಡುವುದು ಈ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಲಸಿಕೆಗಳು ಉಚಿತವಾಗಿ ಲಭ್ಯವಿದೆ”.

ABOUT THE AUTHOR

...view details