ಪ್ರತಿ ವರ್ಷ ಏಪ್ರಿಲ್ 17 ರಂದು ವಿಶ್ವ ಹಿಮೋಫೀಲಿಯಾ ದಿನವನ್ನು ಆಚರಿಸಲಾಗುತ್ತದೆ. ಹಿಮೋಫೀಲಿಯಾ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ನಮ್ಮ ರಕ್ತವು ಸಹಜವಾಗಿ ಹೆಪ್ಪುಗಟ್ಟದ ಸ್ಥಿತಿಯನ್ನೇ ಹಿಮೋಫೀಲಿಯಾ ಎಂದು ಕರೆಯಲಾಗುತ್ತದೆ. ನಮ್ಮ ರಕ್ತದಲ್ಲಿ ರಕ್ತ ಹೆಪ್ಪುಗಟ್ಟುವುದಕ್ಕೆ ಅಗತ್ಯವಾದ ಪ್ರೊಟೀನ್‌ಗಳ ಕೊರತೆ ಉಂಟಾದಾಗ ಈ ಸಮಸ್ಯೆ ಕಂಡುಬರುತ್ತದೆ. ನಿಮಗೆ ಹಿಮೋಫೀಲಿಯಾ ಇದ್ದಲ್ಲಿ, ಗಾಯವಾದಾಗ ದೀರ್ಘಕಾಲದವರೆಗೆ ರಕ್ತಸ್ರಾವವಾಗುತ್ತದೆ. ಸಾಮಾನ್ಯ ವ್ಯಕ್ತಿಯಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಸೋರುವುದು ನಿಲ್ಲುತ್ತದೆಯಾದರೂ, ಇಂತಹ ರೋಗಿಗಳಲ್ಲಿ ಅಷ್ಟು ಬೇಗ ರಕ್ತ ಹೆಪ್ಪುಗಟ್ಟುವುದಿಲ್ಲ.
2020 ಏಪ್ರಿಲ್ 17 ವಿಶ್ವ ಹಿಮೋಫೀಲಿಯಾ ದಿನದ 30ನೇ ವರ್ಷಾಷರಣೆಯೂ ಆಗಿದೆ. ನಮ್ಮ ಸಮುದಾಯವು ಈ ರೋಗದ ಬಗ್ಗೆ ಜಾಗೃತಿ ಮತ್ತು ಅರಿವನ್ನ ತುಂಬ ದೀರ್ಘಕಾಲದಿಂದಲೂ ಹೊಂದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
“ಈ ವರ್ಷದ ಹಿಮೋಫೀಲಿಯಾ ದಿನದ ಥೀಮ್ “ತೊಡಗಿಸಿಕೊಳ್ಳಿ” ಎಂಬುದಾಗಿದೆ. ಸಮುದಾಯ ಮತ್ತು ಜಾಗತಿಕ ಮಟ್ಟದಲ್ಲಿ “ಎಲ್ಲರಿಗೂ ಚಿಕಿತ್ಸೆ” ಎಂಬ ಧ್ಯೇಯದತ್ತ ನಾವು ಕಾರ್ಯನಿರ್ವಹಿಸುವ ಅಗತ್ಯವನ್ನು ಇದು ಸೂಚಿಸುತ್ತದೆ.
ಎಲ್ಲರೂ ಇದರಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ಆನುವಂಶಿಕವಾಗಿ ಪಡೆದುಕೊಳ್ಳುವ ಕುರಿತು ಅರಿವು ಮೂಡಿಸುವುದು ಮತ್ತು ವಿಶ್ವದಲ್ಲಿನ ಪ್ರತಿಯೊಬ್ಬರಿಗೂ ಸೂಕ್ತ ಆರೈಕೆಯನ್ನು ಒದಗಿಸುವುದು ಇದರ ಮುಖ್ಯ ಧ್ಯೇಯವಾಗಿದೆ.
ನಾವು ಈ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮ ಎಷ್ಟು ಮುಖ್ಯವಾಗಿದೆ ಎಂಬುದನ್ನು ವಿಶ್ವ ಹಿಮೋಫೀಲಿಯಾ ದಿನವು ತೋರಿಸುತ್ತದೆ. ಎಲ್ಲರಿಗೂ ಚಿಕಿತ್ಸೆ ಎಂಬ ಹೆಸರಿನಲ್ಲಿ ನಮ್ಮ ಪರಿಶ್ರಮದ ಬಗ್ಗೆ ನಾವು ಹೊಂದಿರಬೇಕಿರುವ ಹೆಮ್ಮೆಯ ಸಮಯ ಕೂಡ ಇದಾಗಿದೆ.
ಕಾರಣಗಳು:-
ನಮಗೆ ರಕ್ತಸ್ರಾವವಾದಾಗ ಸಾಮಾನ್ಯವಾಗಿ ನಮ್ಮ ರಕ್ತ ಕಣಗಳೆಲ್ಲ ಸೇರಿಕೊಂಡು ಹೆಪ್ಪುಗಟ್ಟುತ್ತವೆ. ಆಗ ರಕ್ತಸ್ರಾವ ನಿಲ್ಲುತ್ತದೆ. ಈ ಪ್ರಕ್ರಿಯೆ ನಡೆಸಲು ರಕ್ತ ಕಣಗಳು ಸಶಕ್ತವಾಗಿರುತ್ತವೆ. ಈ ಯಾವುದಾದರೂ ಒಂದು ಹೆಪ್ಪುಗಟ್ಟುವ ಅಂಶದಲ್ಲಿ ಕೊರತೆಯನ್ನು ನೀವು ಹೊಂದಿದ್ದಾಗ ಹಿಮೋಫೀಲಿಯಾ ಕಾಣಿಸಿಕೊಳ್ಳುತ್ತದೆ.
ಹಿಮೋಫೀಲಿಯಾದಲ್ಲಿ ಹಲವು ವಿಧಗಳಿವೆ. ಬಹುತೇಕ ರೂಪಗಳು ಆನುವಂಶೀಯವಾಗಿ ಕಾಣಿಸಿಕೊಳ್ಳುತ್ತವೆ. ಆದರೆ, ಹಿಮೋಫೀಲಿಯಾ ಹೊಂದಿರುವ ಶೇ. 30 ರಷ್ಟು ಜನರಲ್ಲಿ ಕುಟುಂಬದ ಇತಿಹಾಸ ಇರುವುದಿಲ್ಲ. ಈ ವ್ಯಕ್ತಿಗಳಲ್ಲಿ, ಹಿಮೋಫೀಲಿಯಾಗೆ ಸಂಬಂಧಿಸಿದ ವಂಶವಾಹಿಗಳಲ್ಲಿ ಅಚ್ಚರಿಯ ಬದಲಾವಣೆ ಉಂಟಾಗಿರುತ್ತದೆ.
ಅಕ್ವೈರ್ಡ್ ಹಿಮೋಫೀಲಿಯಾ ಎಂಬುದು ಅಪರೂಪದ ವಿಧವಾಗಿದ್ದು, ರಕ್ತದಲ್ಲಿನ ಹೆಪ್ಪುಗಟ್ಟುವ ಅಂಶದ ಮೇಲೆ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯು ದಾಳಿ ನಡೆಸಿದಾಗ ಕಂಡುಬರುತ್ತದೆ. ಇದಕ್ಕೆ ಈ ಅಂಶಗಳು ಕಾರಣವಾಗಿರಬಹುದು:
ಗರ್ಭಾವಸ್ಥೆ
ಸ್ವಯಂ ಗುಣವಾಗುವ ರೋಗಗಳು
ಕ್ಯಾನ್ಸರ್
ಮಲ್ಟಿಪಲ್ ಸ್ಲೆರೋಸಿಸ್
ಹಿಮೋಫೀಲಿಯಾದಿಂದ ಈ ಸಮಸ್ಯೆ ಕಂಡುಬರಬಹುದು:
ಗಂಟುಗಳಲ್ಲಿ ರಕ್ತಸ್ರಾವದಿಂದಾಗಿ ದೀರ್ಘಕಾಲದವರೆಗೆ ಗಂಟು ರೋಗ ಮತ್ತು ನೋವು
ತಲೆಯಲ್ಲಿ ರಕ್ತಸ್ರಾವ ಮತ್ತು ಕೆಲವು ಬಾರಿ ಮಿದುಳಿನಲ್ಲಿ ರಕ್ತಸ್ರಾವ. ಇದರಿಂದಾಗಿ ಮೂರ್ಛೆ ಮತ್ತು ಪ್ಯಾರಾಲಿಸಿಸ್‌ನಂತಹ ದೀರ್ಘಕಾಲೀನ ಸಮಸ್ಯೆ ಕಂಡುಬರಬಹುದು
ರಕ್ತಸ್ರಾವವನ್ನು ನಿಲ್ಲಿಸಲಾಗದಿದ್ದರೆ ಸಾವು ಸಂಭವಿಸಬಹುದು ಅಥವಾ ಮಿದುಳಿನಂತಹ ಪ್ರಮುಖ ಅಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು.
ವಿಧಗಳು:-
ಹಲವು ವಿಧದ ಹಿಮೋಫೀಲಿಯಾಗಳಿವೆ. ಈ ಪೈಕಿ ಈ ಕೆಳಗಿನವು ಅತ್ಯಂತ ಸಾಮಾನ್ಯವಾದವುಗಳು:
ಹಿಮೋಫೀಲಿಯಾ ಎ (ಕ್ಲಾಸಿಕ್ ಹಿಮೋಫೀಲಿಯಾ)
ಹಿಮೋಫೀಲಿಯಾ ಬಿ (ಕ್ರಿಸ್‌ಮಸ್ ರೋಗ)
ಚಿಹ್ನೆ ಮತ್ತು ಗುಣಲಕ್ಷಣಗಳು: -
ಹಿಮೋಫೀಲಿಯಾದ ಸಾಮಾನ್ಯ ಚಿಹ್ನೆಗಳು ಹೀಗಿವೆ:
ಗಂಟುಗಳಲ್ಲಿ ರಕ್ತಸ್ರಾವ. ಇದರಿಂದಾಗಿ ಊತ ಮತ್ತು ನೋವು ಅಥವಾ ಗಂಟುಗಳಲ್ಲಿ ಬಿಗಿತ ಕಂಡುಬರಬಹುದು. ಇದು ಸಾಮಾನ್ಯವಾಗಿ ಮಂಡಿಗಳು, ಮಣಿಕಟ್ಟುಗಳು ಮತ್ತು ಮೊಣಕೈಗಳಲ್ಲಿ ಕಂಡುಬರಬಹುದು.
ಚರ್ಮದಲ್ಲಿ (ದದ್ದು) ಅಥವಾ ಮಾಂಸಖಂಡದಲ್ಲಿ ಮತ್ತು ಮೃದು ಅಂಗಾಂಶದಲ್ಲಿ ರಕ್ತಸ್ರಾವ. ಇದರಿಂದಾಗಿ, ಈ ಪ್ರದೇಶದಲ್ಲಿ ರಕ್ತ ರೂಪುಗೊಂಡಿದೆ (ಹೆಮಾಟೋಮಾ ಎಂದು ಇದನ್ನು ಕರೆಯಲಾಗುತ್ತದೆ).
ಬಾಯಿ ಮತ್ತು ದಂತದಲ್ಲಿ ರಕ್ತಸ್ರಾವ ಮತ್ತು ಹಲ್ಲು ಬಿದ್ದ ನಂತರ ನಿಲ್ಲಿಸಲು ಕಷ್ಟವಾಗುವ ರೀತಿಯಲ್ಲಿ ರಕ್ತಸ್ರಾವ.
ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವ (ಮಕ್ಕಳಲ್ಲಿ ಶಿಶ್ನದ ಮುಂದಿನ ಭಾಗದ ಚರ್ಮವನ್ನು ಕತ್ತರಿಸಿದ ನಂತರ)
ಲಸಿಕೆಗಳನ್ನು ನೀಡಿದ ನಂತರ ರಕ್ತಸ್ರಾವ
ಕಷ್ಟಕರ ಪ್ರಸವದ ನಂತರ ಶಿಶುವಿನ ತಲೆಯಲ್ಲಿ ರಕ್ತಸ್ರಾವ