ಹೈದರಾಬಾದ್: ಏಷ್ಯಾದಲ್ಲಿಯೇ ಅತೀದೊಡ್ಡ ಕೊಳಗೇರಿ ಪ್ರದೇಶ ಎಂಬ ಕುಖ್ಯಾತಿ ಪಡೆದುಕೊಂಡಿದ್ದ ಮುಂಬೈನ ಧಾರಾವಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಅಟ್ಟಹಾಸ ಜೋರಾಗಿತ್ತು. ಆದ್ರೆ ಇದೀಗ ಪ್ರಕರಣ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಇತರೆ ಎಲ್ಲ ರಾಜ್ಯ ಹಾಗೂ ಪ್ರಮುಖ ಪ್ರದೇಶಗಳಿಗೆ ಮಾದರಿಯಾಗಿದೆ.
ಮಹಾರಾಷ್ಟ್ರದಲ್ಲಿ ಪ್ರತಿದಿನ ಸಾವಿರಾರು ಹೊಸ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಅದೇ ರೀತಿ ಲಕ್ಷಾಂತರ ಜನರು ವಾಸ ಮಾಡಿರುವ ಕೊಳಗೇರಿ ಪ್ರದೇಶ ಧಾರಾವಿಯಲ್ಲೂ ಈ ಹಿಂದೆ ಪ್ರತಿದಿನ ಅನೇಕ ಹೊಸ ಕೊರೊನಾ ಕೇಸ್ ಪತ್ತೆಯಾಗುತ್ತಿದ್ದವು. ಆದರೆ ರಾಜ್ಯ ಸರ್ಕಾರ, ಕೇಂದ್ರ ಹಾಗೂ ಎನ್ಜಿಓಗಳ ಮಹತ್ವದ ಕೆಲಸದಿಂದ ಇದೀಗ ಸೋಂಕಿತ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗಿವೆ. ಕಟ್ಟುನಿಟ್ಟಿನ ನಿರ್ಧಾರ, ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿ ಪಾಲನೆ ಮಾಡುವುದರಿಂದ ಮಹಾಮಾರಿ ವಿರುದ್ಧ ಜಯ ಸಾಧಿಸಬಹುದು ಎಂಬುದನ್ನ ಎಲ್ಲರಿಗೂ ತೋರಿಸಿಕೊಟ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಮೆಚ್ಚುಗೆ!