ಕರ್ನಾಟಕ

karnataka

ETV Bharat / bharat

ವಿಶ್ವ ಆರೋಗ್ಯ ದಿನ;  ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ, ಉಪರಾಷ್ಟ್ರಪತಿ ಮನವಿ - World Health Day news

"ವಿಶ್ವ ಆರೋಗ್ಯ ದಿನದಂದು ನಾವು ಪರಸ್ಪರರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವುದಲ್ಲದೇ, ಕೊರೊನಾ ವಿರುದ್ಧದ ಯುದ್ಧದಲ್ಲಿ ಧೈರ್ಯದಿಂದ ಹೋರಾಡುತ್ತಿರುವ ಎಲ್ಲ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಮ್ಮ ಕೃತಜ್ಞತೆ ಸಲ್ಲಿಸೋಣ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

modi, venkaiah naidu
ಮೋದಿ-ವೆಂಕಯ್ಯ ನಾಯ್ಡು

By

Published : Apr 7, 2020, 1:34 PM IST

ನವದೆಹಲಿ: ಕೊರೊನಾ ವಿರುದ್ಧದ ಹೋರಾಡುತ್ತಿರುವ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ನಮ್ಮ ಕೃತಜ್ಞತೆ ತಿಳಿಲುಸಲು ವಿಶ್ವ ಆರೋಗ್ಯ ದಿನವು ಅವಕಾಶ ನೀಡಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

"ವಿಶ್ವ ಆರೋಗ್ಯ ದಿನದಂದು ನಾವು ಪರಸ್ಪರರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವುದಲ್ಲದೇ, ಕೊರೊನಾ ವಿರುದ್ಧದ ಯುದ್ಧದಲ್ಲಿ ಧೈರ್ಯದಿಂದ ಹೋರಾಡುತ್ತಿರುವ ಎಲ್ಲ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಮ್ಮ ಕೃತಜ್ಞತೆ ಸಲ್ಲಿಸೋಣ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಅಂತರದಂತಹ ಅಭ್ಯಾಸಗಳನ್ನು ಪಾಲಿಸುವ ಮೂಲಕ ನಮ್ಮ ಮತ್ತು ಇತರರ ಜೀವನವನ್ನು ರಕ್ಷಿಸುವ ಕೆಲಸ ಮಾಡೋಣ ಎಂದು ಮೋದಿ ಹೇಳಿದ್ದಾರೆ.

ವೈದ್ಯಕೀಯ ಸಮುದಾಯದ ನಿಸ್ವಾರ್ಥ ಕಾರ್ಯವನ್ನು ಗೌರವಿಸಬೇಕು ಮತ್ತು ಪ್ರಶಂಸಿಸಬೇಕು ಎಂದು ಉಪಾಧ್ಯಕ್ಷರು ನಾಗರಿಕರಿಗೆ ಮನವಿ ಮಾಡಿದ್ದಾರೆ. ವೈದ್ಯರು ಮತ್ತು ನರ್ಸ್​ಗಳ ಮೇಲೆ ದುಷ್ಕೃತ್ಯ ಅಥವಾ ಹಲ್ಲೆ ಸ್ವೀಕಾರಾರ್ಹವಲ್ಲ. ಇದರ ಹಿಂದಿನ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕಚೇರಿ ಟ್ವೀಟ್ ಮಾಡಿದೆ.

ABOUT THE AUTHOR

...view details