ಸೆಪ್ಟೆಂಬರ್ 21 ವಿಶ್ವ ಕೃತಜ್ಞತಾ ದಿನ. ಜಗತ್ತು ಒಗ್ಗೂಡಿ ಕೃತಜ್ಞತೆಯನ್ನು ಆಚರಿಸಬೇಕಾದ ದಿನ. ಈ ದಿನ ನಮ್ಮನ್ನು ವಿನಮ್ರರನ್ನಾಗಿ ಮಾಡುವುದು ಮಾತ್ರವಲ್ಲದೆ, ಸಂತೋಷ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೃತಜ್ಞತೆ ಎಂಬುದು, ಶಕ್ತಿಯುತವಾದ ಭಾವನೆಯಾಗಿ, ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ.
ವಿಶ್ವ ಕೃತಜ್ಞತಾ ದಿನದ ಹಿನ್ನೆಲೆ:ವಿಶ್ವ ಕೃತಜ್ಞತಾ ದಿನವು ವಿಶ್ವಸಂಸ್ಥೆಯ ರಜಾದಿನ. 1965ರಲ್ಲಿ ಹವಾಯಿಯ ವಿಶ್ವಸಂಸ್ಥೆಯ ಕಟ್ಟಡದ ಧ್ಯಾನ ಕೇಂದ್ರದಲ್ಲಿ ಥ್ಯಾಂಕ್ಸ್ ಗಿವಿಂಗ್ ಭೋಜನ ಕಾರ್ಯಕ್ರಮ ನಡೆಯಿತು. ಅಲ್ಲಿ, ಮೆಡಿಟೇಶನ್ ಶಿಕ್ಷಕ ಮತ್ತು ಯುಎನ್ ಮೆಡಿಟೇಶನ್ ಗುಂಪಿನ ನಿರ್ದೇಶಕರಾದ ಶ್ರೀಚಿಮನಯ್ ಅವರು ವಿಶ್ವದಾದ್ಯಂತ ಜನರನ್ನು ಕೃತಜ್ಞತೆಯಿಂದ ಏಕೀಕರಿಸಲು ವಿಶೇಷ ರಜಾದಿನವನ್ನು ರಚಿಸುವಂತೆ ಸೂಚಿಸಿದರು. ಅಲ್ಲಿ ಹಾಜರಿದ್ದ ಜನರು ಪ್ರತಿ ಸೆಪ್ಟೆಂಬರ್ 21ರಂದು ತಮ್ಮ ದೇಶದಲ್ಲಿ ಕೃತಜ್ಞತಾ ಸಭೆ ನಡೆಸುವ ಭರವಸೆ ನೀಡಿದರು. 1977ರಲ್ಲಿ ಶ್ರೀಚಿಮನಯ್ ಅವರ ಕೆಲಸವನ್ನು ಗುರುತಿಸಿ, ವಿಶ್ವ ಕೃತಜ್ಞತಾ ದಿನವನ್ನು ಅಧಿಕೃತಗೊಳಿಸುವ ನಿರ್ಣಯವನ್ನು ಯುಎನ್ ಮೆಡಿಟೇಶನ್ ಗುಂಪು ಕೋರಿತು. ಅಂದಿನಿಂದ, ವಿಶ್ವ ಕೃತಜ್ಞತಾ ದಿನವು ವಾರ್ಷಿಕ ಅಂತಾರಾಷ್ಟ್ರೀಯ ದಿನವಾಗಿದೆ.