ಕರ್ನಾಟಕ

karnataka

ETV Bharat / bharat

ವಿಶ್ವ ಪರಿಸರ ದಿನ: ಜೀವವೈವಿಧ್ಯತೆಯತ್ತ ಗಮನ ಹರಿಸೋಣ - ವಿಶ್ವಸಂಸ್ಥೆ

ಈ ವರ್ಷ ಪರಿಸರ ದಿನದ ಥೀಮ್ 'ಜೀವ ವೈವಿಧ್ಯತೆ'ಯಾಗಿದೆ. ನಾವು ಜೀವ ವೈವಿಧ್ಯತೆಯನ್ನು ನಾಶಪಡಿಸಿದಾಗ, ಇಡೀ ವ್ಯವಸ್ಥೆಯೇ ಬುಡ ಮೇಲಾಗುತ್ತದೆ ಎಂದು ಕೋವಿಡ್-19 ತಿಳಿಸಿದೆ. ಪರಿಸರಕ್ಕೆ ಸಮಸ್ಯೆಯಾಗಬಲ್ಲ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತರುವ ಮೂಲಕ ನಾವು ಪರಿಸರದೆಡೆಗೆ ನಮ್ಮ ಕರ್ತವ್ಯ ನಿಭಾಯಿಸಬೇಕು.

environment day
environment day

By

Published : Jun 5, 2020, 12:39 PM IST

ಹೈದರಾಬಾದ್:ಪರಿಸರ ಜಾಗೃತಿಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ವಿಶ್ವಸಂಸ್ಥೆಯ ಪ್ರಮುಖ ಆಚರಣೆಯಲ್ಲಿ ಆಚರಿಸಲಾಗುತ್ತದೆ.

1974 ರಿಂದ ಪ್ರತಿವರ್ಷ ಜೂನ್ 5ರಂದು ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಸರ್ಕಾರಗಳು, ಸೆಲೆಬ್ರಿಟಿಗಳು ಮತ್ತು ನಾಗರಿಕರು ಪರಿಸರದ ಸಮಸ್ಯೆಗಳ ಕುರಿತು ಹಾಗೂ ಅವುಗಳ ಪರಿಹಾರದ ಬಗ್ಗೆ ಕೇಂದ್ರೀಕೃತರಾಗುತ್ತಾರೆ.

ಈ ವರ್ಷ ಪರಿಸರ ದಿನದ ಥೀಮ್ 'ಜೀವವೈವಿಧ್ಯತೆ'ಯಾಗಿದ್ದು, ಜರ್ಮನಿಯ ಸಹಯೋಗದೊಂದಿಗೆ ಕೊಲಂಬಿಯಾ ಆತಿಥ್ಯ ವಹಿಸಲಿದೆ. ಆದರೆ, ಈ ಬಾರಿ ಪ್ರತಿ ವರ್ಷದಂತೆ ಆಚರಣೆ ನಡೆಯುವುದಿಲ್ಲ.

ಬ್ರೆಜಿಲ್, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಳ್ಗಿಚ್ಚು, ಪೂರ್ವ ಆಫ್ರಿಕಾದಾದ್ಯಂತ ಮಿಡತೆಗಳ ದಾಳಿ ಹಾಗೂ ಜಾಗತಿಕವಾಗಿ ಹರಡಿದ ಸಾಂಕ್ರಾಮಿಕ ರೋಗವು ಮಾನವ ಹಾಗೂ ಜೀವವೈವಿಧ್ಯತೆ ಸಂಬಂಧವನ್ನು ತೋರುತ್ತಿದೆ.

ತಿನ್ನುವ ಆಹಾರಗಳು, ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ವಾಸಯೋಗ್ಯ ಹವಾಮಾನವನ್ನ ಮಾನವರಾದ ನಾವು ಲಘುವಾಗಿ ಪರಿಗಣಿಸಿದ್ದೇವೆ. ನಾವು ಜೀವವೈವಿಧ್ಯತೆಯನ್ನು ನಾಶಪಡಿಸಿದಾಗ, ಇಡೀ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಕೋವಿಡ್-19ಗೆ ತಿಳಿಸಿದೆ.

ಹೆಚ್ಚಿನ ದೇಶಗಳು ಲಾಕ್​​​​​​​​ಡೌನ್ ಆದ ಕಾರಣ ಪರಿಸರ ತನ್ನಿಂತಾನೆ ಸ್ವಚ್ಛಗೊಂಡಿದೆ. ಜೀವವೈವಿಧ್ಯತೆ ಚೇತರಿಸಿಕೊಂಡಿದೆ. ಪರಿಸರಕ್ಕೆ ಸಮಸ್ಯೆಯಾಗಬಲ್ಲ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರುವ ಮೂಲಕ ನಾವು ಪರಿಸರದೆಡೆಗೆ ನಮ್ಮ ಕರ್ತವ್ಯ ನಿಭಾಯಿಸಬೇಕಾಗಿದೆ. ನಮ್ಮ ಸ್ವಂತ ಉಳಿವಿಗಾಗಿ ಪರಿಸರವನ್ನು ಸಂರಕ್ಷಿಸಬೇಕಾಗಿದೆ.

ABOUT THE AUTHOR

...view details