ಕರ್ನಾಟಕ

karnataka

ETV Bharat / bharat

ವಿಶ್ವ ಆನೆಗಳ ದಿನ: ಶಕ್ತಿ, ಸೂಕ್ಷ್ಮತೆಯ ಸಂಕೇತವಾದ ಸಸ್ತನಿಯ ದಿನವಿದು - mammal symbolic

ಪುಟ್ಟ ಕಣ್ಣುಗಳಿಂದ ಸೂಕ್ಷ್ಮವಾಗಿ ಗ್ರಹಿಸಬಲ್ಲ ಗಜಪಡೆಗಳು ಏಷ್ಯನ್​ ಮತ್ತು ಆಫ್ರಿಕನ್​ ರಾಷ್ಟ್ರಗಳಲ್ಲಿ ಹೇರಳವಾಗಿವೆ. ಅಷ್ಟೇ ಅಲ್ಲದೆ, ಗಜಪಡೆಗಳು ಕುಟುಂಬ ಬಾಂಧವ್ಯ ಹೊಂದಿರುತ್ತವೆ.

ವಿಶ್ವ ಆನೆ ದಿನ
ವಿಶ್ವ ಆನೆ ದಿನ

By

Published : Aug 13, 2020, 9:02 AM IST

ನವದೆಹಲಿ: ಭೂಮಿಯಲ್ಲಿ ದೈತ್ಯ ಗಾತ್ರದಲ್ಲಿ ಮತ್ತು ಸೂಕ್ಷ್ಮತೆಗೆ ಹೆಸರುವಾಸಿಯಾದ ಜೀವಿ ಎಂದರೆ ಅದು ಆನೆ. ದೇಹದ ಗಾತ್ರದಲ್ಲಿ ಬೃಹದಾಕಾರವಾಗಿದ್ದರೂ ಸಹ, ಸಣ್ಣ ಕಣ್ಣುಗಳಿಂದ ಆಕರ್ಷಣೀಯವಾಗಿದೆ. ಇನ್ನು ಪುಟ್ಟ ಕಣ್ಣುಗಳಾದರೂ ಸೂಕ್ಷ್ಮತೆಗೆ ಹೆಸರುವಾಸಿ.

ಗಜ ಪಡೆಗಳು ಪ್ರಬಲವಾಗಿರುತ್ತವೆ, ಅಷ್ಟೇ ಅಲ್ಲದೆ, ಇವುಗಳು ಶಕ್ತಿ, ಸಹಬಾಳ್ವೆ, ರಕ್ಷಣೆ ಮತ್ತು ಸ್ನೇಹದ ಸಂಕೇತವಾಗಿವೆ. ಇವುಗಳು ಗುಂಪಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇನ್ನು ಮುಖ್ಯವಾಗಿ ಹೇಳುವುದಾದರೆ, ಈ ಗುಂಪಿನಲ್ಲಿ ಮಾತೃಪ್ರಧಾನತೆ ಇರುತ್ತದೆ. ಈ ಮೂಲಕ ನಿಕಟವಾದ ಕುಟುಂಬವನ್ನು ಗಜಪಡೆಗಳು ಹೊಂದಿರುತ್ತವೆ ಎಂದು ಹೇಳಲಾಗುತ್ತಿದೆ.

ಇನ್ನು ಆನೆಗಳ ಸಂಖ್ಯೆ ಭಾರತ ಮತ್ತು ಆಫ್ರಿಕನ್​ ದೇಶಗಳಲ್ಲಿ ಹೇರಳವಾಗಿದೆ. ಮುಖ್ಯವಾಗಿ ಹೇಳುವುದಾದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳ ಸಂತತಿ ಇದೆ. ಇನ್ನು ಏಷ್ಯನ್​ ಆನೆಗಳನ್ನು ಭಾರತದ ಆನೆ ಎಂದು ಕರೆಯುವುದುಂಟು. ಆದರೆ, ಆನೆಗಳ ಸಂತತಿಯನ್ನು ಸಂರಕ್ಷಿಸಿ ಇಡಲಾಗುತ್ತಿದೆ. ಕಾರಣ ಆನೆಗಳನ್ನು ಹಿಡಿಯುವುದು, ದಂತ ಕದಿಯುವುದು, ಪಳಗಿಸುವುದು ಮುಂತಾದ ಅಕ್ರಮ ಕಾರ್ಯಗಳು ಅವುಗಳನ್ನು ಅಳಿವಿನ ಅಂಚಿಗೆ ದೂಡಿವೆ.

ಇನ್ನು ಮಾನವನ ಉದ್ಧಟತನದಿದ ಕಾಡುಗಳು ನಾಶವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳು ನಾಡಿಗೆ ದಾಂಗುಡಿ ಇಡುತ್ತಿವೆ. ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷದಲ್ಲಿ ಕಾಡು ಅತಿಕ್ರಮಣಗೊಳ್ಳುತ್ತಿದೆ. ಅದೆಷ್ಟೋ ಪ್ರಾಣಿಗಳು ನಾಡಿಗೆ ಬಂದು ತಮ್ಮ ಪ್ರಾಣ ಕಳೆದುಕೊಂಡಿವೆ.

ABOUT THE AUTHOR

...view details