ಕರ್ನಾಟಕ

karnataka

ಬರಡಾಗಿದ್ದ ಅರಾವಳಿ ಇದೀಗ ಮತ್ತೆ ಹಚ್ಚ ಹಸಿರಿಂದ ಕಂಗೊಳಿಸಲು ಕಾರಣವೇನು?

ಪ್ರತೀ ವರ್ಷದಂತೆ ಈ ವರ್ಷವೂ ಸಹ ಭೂ ದಿನಾಚರಣೆಯನ್ನು ಇಂದು ಆಚರಿಸಲಾಗಿದ್ದು, ಭೂಮಿ ಸಕಲ ಜೀವರಾಶಿಗಳ ಅವಿಭಾಜ್ಯವಾಗಿರುವಂತಹದ್ದು, ಇಂತಹ ನಮ್ಮ ಮಾತೃ ಭೂಮಿಗೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದಕ್ಕಿಂತ ಪಡೆದುಕೊಂಡದ್ದೇ ಹೆಚ್ಚು. ಭೂಮಿ, ಪರಿಸರ, ಸಸ್ಯ ಪ್ರಬೇಧ ಇವೆಲ್ಲವೂ ನಮ್ಮ ಜೀವನದಲ್ಲಿ ನೇರವಾಗಿಯೋ ಅಥವಾ ಪರೋಕ್ಷವಾಗಿ ಅತ್ಯಂತ ಅವಶ್ಯವಾದದ್ದಾಗಿದೆ.

By

Published : Apr 22, 2020, 11:11 PM IST

Published : Apr 22, 2020, 11:11 PM IST

ಅರಾವಳಿ
World Earth Day

ಉದಯಪುರ (ರಾಜಸ್ಥಾನ): ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಭಯಾನಕತೆ ಮತ್ತು ಅನಿಶ್ಚಿತತೆಯ ನಡುವೆ, ಈ ವರ್ಷ ನಾವು ಭೂ ದಿನಾಚರಣೆಯ 50 ನೇ ವಾರ್ಷಿಕೋತ್ಸವವನ್ನು ಇಂದು ಆಚರಿಸಿದ್ದೇವೆ. ಪ್ರಕೃತಿ, ಸಸ್ಯಗಳು ಮತ್ತು ಭೂಮಿಯೊಂದಿಗೆ ನಾವು ಹೊಂದಿರುವ ಸಂಪರ್ಕವು ವರ್ಣಿಸಲಸಾಧ್ಯವಾದುದು. ನಮ್ಮ ದಿನ ನಿತ್ಯ ಜೀವನದ ಸಕಲಕ್ಕೂ ಭೂಮಿ ಎಂಬುದು ಅವಿಭಾಜ್ಯವಾಗಿದೆ.

ಈ ವರ್ಷದ ಭೂ ದಿನಾಚರಣೆಯ ನಿಮಿತ್ತ, ಈಟಿವಿ ಭಾರತ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿನ ಅರಾವಳಿ ಶ್ರೇಣಿಯ ವಿಶೇಷ ವರದಿಯನ್ನು ಪ್ರಸ್ತುತಪಡಿಸುತ್ತಿದೆ. ಇದು ಮತ್ತೊಮ್ಮೆ ಹಸಿರನ್ನು ಮರಳಿ ಪಡೆಯಲು ಪ್ರಾರಂಭಿಸುರುವುದು ವಿಶೇಷ ಸಂಗತಿಯಾಗಿದೆ.

ಮಾರ್ಬಲ್ ಸಿಮೆಂಟಿನ ಕೊಳೆತ ತ್ಯಾಜ್ಯಗಳು, ಗಣಿಗಾರಿಕೆ ಮತ್ತುಇನ್ನಿತರ ಸಂಸ್ಕರಣಾ ಚಟುವಟಿಕೆಗಳ ಮೂಲಕ ಅರಾವಳಿ ಶ್ರೇಣಿಯಲ್ಲಿನ ಸಸ್ಯವರ್ಗಗಳ ಸಂಖ್ಯೆ ಬತ್ತುತ್ತಾ ಬಂದಿತ್ತು. ಅಕ್ರಮ ಕಾರ್ಯಗಳಿಂದಾಗಿ ಅರಾವಳಿ ಪ್ರದೇಶವು ಸಸ್ಯವರ್ಗವಿಲ್ಲದ ಬಂಜರು ಪರ್ವತಗಳಾಗಿ ಮಾರ್ಪಟ್ಟಿತ್ತು.

ಬಹು ಮುಖ್ಯವಾಗಿ ಈ ಅರಣ್ಯ ಪ್ರದೇಶ ನಶಿಸಿಹೋಗಲು ಮಾರ್ಬಲ್​ ಸಿಮೆಂಟ್​ ಫ್ಯಾಕ್ಟರಿಗಳು ಕಾರಣವಾಗಿದ್ದವು. ಈ ಕಾರ್ಖಾನೆಗಳಿಂದಾಗಿ ಅರಾವಳಿ ಪ್ರದೆಶದ ಸಸ್ಯಗಳ ಬೆಳವಣಿಗೆಯನ್ನು ಕುಂಟಿತಗೊಳಿಸುವ ಮೂಲಕ ವನಮೂಲಿಕೆ ಸಸ್ಯವರ್ಗದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿತ್ತು.

ಇದನ್ನೆಲ್ಲ ಗಂಭೀರವಾಗಿ ಗಮನಿಸಿದ ಜಿಲ್ಲಾಡಳಿತ, ಇದೀಗ ಅರಾವಳಿ ಪ್ರದೇಶವನ್ನು ಮತ್ತೊಮ್ಮೆ ವಿವಿಧ ಸಸ್ಯವರ್ಗಗಳಿಂದ ಹಚ್ಚ ಹಸಿರನ್ನಾಗಿಸಲು ಕ್ರಮ ಕೈಗೊಂಡಿದೆ.

ಮಾರ್ಬಲ್ ಅಸೋಸಿಯೇಷನ್‌ನ ಬೆಂಬಲದೊಂದಿಗೆ ಈ ಹಿಂದೆ ಜಿಲ್ಲಾಡಳಿತ ತೆಗೆದುಕೊಂಡ ಒಂದು ಕ್ರಮದಿಂದಾಗಿ ಅರಾವಳಿ ಪ್ರದೇಶ ನಿರ್ಜನ ನೋಟವನ್ನು ಬೀರಿದಂತೆ ಭಾಸವಾಗುತ್ತಿತ್ತು. ಆದರೆ ಇದೀಗ ಮತ್ತೊಮ್ಮೆ ಈ ಪ್ರದೇಶಕ್ಕೆ ಹಚ್ಚ ಹಸಿರು ಮರಳುತ್ತಿರುವುದು ಸಂತಸದಾಯಕವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಅರಾವಳಿ ಶ್ರೇಣಿಯ ಸ್ಥಿತಿಯು, ರಾಜ್ಯದ ಪ್ರಸ್ತುತ ದಿನದ ಇತರ ಜಿಲ್ಲೆಗಳಿಗೂ ಹೋಲುತ್ತದೆ. ಪರಿಸರ, ಕಾಡು-ಮೇಡು, ನಮ್ಮ ಮಾತೃಭೂಮಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ABOUT THE AUTHOR

...view details