ಕರ್ನಾಟಕ

karnataka

ETV Bharat / bharat

ವಿಶ್ವ 'ಅಂತಾರಾಷ್ಟ್ರೀಯ ನ್ಯಾಯ' ದಿನಾಚರಣೆ ಇಂದು (ಜು.17) - ನ್ಯಾಯಾಂಗ ವ್ಯವಸ್ಥೆ

1998ರ ಜುಲೈ 17 ರಂದು ಪ್ರಥಮ ಬಾರಿಗೆ 'ಅಂತಾರಾಷ್ಟ್ರೀಯ ನ್ಯಾಯ' ದಿನಾಚರಣೆ ಆಚರಿಸಲಾಯಿತು. ಯುದ್ಧ ಕೈದಿಗಳಿಗೆ ನ್ಯಾಯ ಒದಗಿಸುವುದು, ಮಾನವತೆಯ ವಿರುದ್ಧದ ಕ್ರೂರತೆಗಳನ್ನು ತಡೆಯುವುದು, ಸಾಮೂಹಿಕ ಹತ್ಯೆಗಳ ತಡೆ ಮುಂತಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಕುರಿತಾಗಿ ವಿಶ್ವದ ರಾಷ್ಟ್ರಗಳು ಈ ದಿನ ಒಟ್ಟಾಗಿ ಗೊತ್ತುವಳಿಯನ್ನು ಸ್ವೀಕರಿಸಿದವು. ಈ ಗೊತ್ತುವಳಿಯನ್ನು ರೋಮನ್ ಕಾನೂನು ಎಂದು ಕರೆಯಲಾಗಿದೆ.

International Justice
International Justice

By

Published : Jul 17, 2020, 8:12 PM IST

ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ನ ಕಾರ್ಯಗಳಿಗೆ ಬೆಂಬಲ ಸೂಚಿಸಲು ಪ್ರತಿವರ್ಷ ಜುಲೈ 17 ರಂದು 'ಅಂತಾರಾಷ್ಟ್ರೀಯ ನ್ಯಾಯ' ದಿನಾಚರಣೆ ಆಚರಿಸಲಾಗುತ್ತದೆ. ಅಸಮಾನತೆಗಳನ್ನು ದೂರಮಾಡಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ಈ ಬಾರಿಯ ಅಂತಾರಾಷ್ಟ್ರೀಯ ನ್ಯಾಯ ದಿನಾಚರಣೆಯ ಘೋಷವಾಕ್ಯವಾಗಿದೆ.

ನ್ಯಾಯದ ಪರವಾಗಿ ನಿಲ್ಲುವ ಹಾಗೂ ಸಂತ್ರಸ್ತರ ಹಕ್ಕುಗಳಿಗಾಗಿ ಹೋರಾಡುವ ಎಲ್ಲರನ್ನೂ ಒಗ್ಗೂಡಿಸಲು ನ್ಯಾಯ ದಿನಾಚರಣೆ ಸಹಕಾರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಸ್ವರೂಪದ ಕ್ರಿಮಿನಲ್ ಕೃತ್ಯಗಳು ಜರುಗದಂತೆ ಹಾಗೂ ಆ ಮೂಲಕ ವಿಶ್ವದ ಶಾಂತಿ, ಸುರಕ್ಷತೆಯನ್ನು ಕಾಪಾಡಲು ಈ ದಿನಾಚರಣೆ ಮಹತ್ವದ್ದಾಗಿದೆ.

ರೋಮ್​ ಕಾನೂನು ಜಾರಿ

1998ರ ಜುಲೈ 17 ರಂದು ಪ್ರಥಮ ಬಾರಿಗೆ ವಿಶ್ವ 'ಅಂತಾರಾಷ್ಟ್ರೀಯ ನ್ಯಾಯ' ದಿನಾಚರಣೆ ಆಚರಿಸಲಾಯಿತು. ಯುದ್ಧ ಕೈದಿಗಳಿಗೆ ನ್ಯಾಯ ಒದಗಿಸುವುದು, ಮಾನವತೆಯ ವಿರುದ್ಧದ ಕ್ರೂರತೆಗಳನ್ನು ತಡೆಯುವುದು, ಸಾಮೂಹಿಕ ಹತ್ಯೆಗಳ ತಡೆ ಮುಂತಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಕುರಿತಾಗಿ ವಿಶ್ವದ ರಾಷ್ಟ್ರಗಳು ಈ ದಿನ ಒಟ್ಟಾಗಿ ಗೊತ್ತುವಳಿಯನ್ನು ಸ್ವೀಕರಿಸಿದವು. ಈ ಗೊತ್ತುವಳಿಯನ್ನು ರೋಮನ್ ಕಾನೂನು ಎಂದು ಕರೆಯಲಾಗಿದೆ.

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್​ ಆರಂಭ

ರೋಮ್​ನಲ್ಲಿ ಸುಮಾರು 120 ದೇಶಗಳು ಸೇರಿ ರೋಮ್​ ಕಾನೂನಿಗೆ ಸಹಿ ಹಾಕಿದ ನಂತರ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ ಆರಂಭವಾಯಿತು. ಅತ್ಯಂತ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್​​ ನೀಡುವ ಆದೇಶಗಳನ್ನು ಈ ಎಲ್ಲ ರಾಷ್ಟ್ರಗಳು ಪಾಲಿಸುವುದಾಗಿ ವಾಗ್ದಾನ ಮಾಡಿವೆ. ಯಾವುದೇ ರಾಷ್ಟ್ರವು ಆರೋಪಿಗಳನ್ನು ತನ್ನ ರಾಷ್ಟ್ರಕ್ಕೆ ಕರೆತಂದು ವಿಚಾರಣೆ ನಡೆಸಲು ಆಗದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕೋರ್ಟ್​​ನಲ್ಲಿ ವಿಚಾರಣೆ ಮಾಡುವಂತೆ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ

ಭಾರತದ ಸುಪ್ರೀಂ ಕೋರ್ಟ್​ನಲ್ಲಿ 59,867 ಹಾಗೂ ವಿವಿಧ ಹೈಕೋರ್ಟ್​ ಪೀಠಗಳಲ್ಲಿ 44.75 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇನ್ನು ಜಿಲ್ಲಾ ಹಾಗೂ ಸೆಷನ್ಸ್​ ಕೋರ್ಟ್​ಗಳಲ್ಲಿ ಸುಮಾರು 3.14 ಕೋಟಿಗೂ ಅಧಿಕ ಪ್ರಕರಣಗಳ ವಿಚಾರಣೆ ಬಾಕಿ ಇವೆ ಎಂದು 2019ರ ನವೆಂಬರ್​ನಲ್ಲಿ ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ ಮಾಹಿತಿ ನೀಡಿದ್ದರು. 2014 ರಿಂದಲೂ ಬಾಕಿ ಪ್ರಕರಣಗಳ ವಿಚಾರಣೆ ಅಂಥ ಪ್ರಗತಿಯನ್ನು ಸಾಧಿಸಿಲ್ಲ.

ನ್ಯಾಯಾಧೀಶರ ಕೊರತೆ

ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 19 ಜನ ನ್ಯಾಯಾಧೀಶರಿದ್ದಾರೆ. ಹೈಕೋರ್ಟ್​ಗಳಲ್ಲಿ 448, ಅಧೀನ ನ್ಯಾಯಾಲಯಗಳಲ್ಲಿ 5000 ಹಾಗೂ ಇನ್ನಿತರ ನ್ಯಾಯಾಲಯಗಳಲ್ಲಿ 21,542 ನ್ಯಾಯಾಧೀಶರ ಸ್ಥಾನಗಳು ಖಾಲಿ ಇವೆ ಎಂದು ಅಂಕಿ ಸಂಖ್ಯೆಗಳಿಂದ ತಿಳಿದುಬಂದಿದೆ.

ABOUT THE AUTHOR

...view details