ನವದೆಹಲಿ:ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರತಿ ಎಸೆತ ಉಭಯ ತಂಡಗಳಿಗೆ ಮಹತ್ವದ್ದಾದರೆ, ಅದೇ ಪಂದ್ಯದ ಪ್ರತಿ ಸೆಕೆಂಡು, ಜಾಹಿರಾತು ವಿತರಣಾ ಹಕ್ಕು ಖರೀದಿದಾರರಿಗೆ ಚಿನ್ನದ ಮೊಟ್ಟೆ ಇಡುವ ಸಮಯ!
ಎಂಟು ವರ್ಷಕ್ಕೆ 12 ಸಾವಿರ ಕೋಟಿ ರೂ. ನೀಡಿ ಸ್ಯಾಟ್ಲೈಟ್ ಹಕ್ಕು ಪಡೆದ ಸ್ಟಾರ್ ಇಂಡಿಯಾ, ವರ್ಲ್ಡ್ಕಪ್ನಲ್ಲಿ ಭರ್ಜರಿ ಹಣ ಬಾಚಿಕೊಳ್ಳಲು ಪ್ರತಿ ಸೆಕೆಂಡ್ ಜಾಹೀರಾತಿಗೆ ₹ 1.7 ಲಕ್ಷದಿಂದ ₹ 2 ಲಕ್ಷದವರೆಗೆ ದರ ವಿಧಿಸಿದೆ. ಇದು ಭಾರತ ಮೇಲೆ ನಡೆಯುವ ಪಂದ್ಯಾವಳಿಗೆ ನಿಗದಿಪಡಿಸಿದ ಮೊತ್ತ ಮಾತ್ರ ಅನ್ನೋದು ಗಮನಾರ್ಹ ಸಂಗತಿ.