ಹೈದರಾಬಾದ್: ಅಂತಾರಾಷ್ಟ್ರೀಯ ಜೈವಿಕ ವೈವಿದ್ಯತೆಯ ದಿನ - 2020 ಆಚರಿಸುತ್ತಿರುವ ನಾವು ನೆನಪಿನಲ್ಲಿಡಬೇಕಾದ ಅಂಶವೇನೆಂದರೆ ನಾವೆಲ್ಲರೂ ಪ್ರಕೃತಿ, ನಾವು ಅವುಗಳಿಂದ ಪ್ರತ್ಯೇಕವಾಗಿಲ್ಲ. ವಿಶ್ವದ ಎಲ್ಲ ಜೀವಿಗಳು ಒಂದೇ ಕುಟುಂಬ ಎಂದು ನಮ್ಮ ಸಂಬಂಧಗಳನ್ನು ಪ್ರಾಚೀನ ಋಷಿಮುನಿಗಳು ಬಣ್ಣಿಸಿದ್ದಾರೆ. ವಸುದೈವ ಕುಟುಂಬಕಂ ಎಂಬ ತತ್ತ್ವದಡಿ ನಾವು ಬದುಕಿದ್ದು, ತೆಳ್ಳನೆಯ ಎರೆಹುಳುವಿನಿಂದ ಹಿಡಿದು ಪ್ರಬಲ ಆನೆಯವರೆಗೆ ಪರಸ್ಪರ ಬೆಂಬಲ ಮತ್ತು ಉಳಿಯುವಿಕೆಗೆ ನೆರವಾಗುತ್ತದೆ. ಕೆಲವೊಮ್ಮೆ ನಾವು ಈ ಭೂಮಂಡಲದಲ್ಲಿ ಕಠಿಣ(ಬರಗಾಲ, ಪ್ರವಾಹ, ಇತ್ಯಾದಿ) ಪಾಠಗಳನ್ನ ಕಲಿತಿರುತ್ತೇವೆ ಮತ್ತು ಎಲ್ಲರ ಜೀವನದ ಪರಾವಲಂಬನೆಯನ್ನ ಆನಂದಿಸಿರುತ್ತೇವೆ.
ನಮ್ಮ ಪೂರ್ವಜರ ಶತಮಾನಗಳ ಶ್ರಮದ ಫಲವಾಗಿ ನಾವು ವೈವಿಧ್ಯಮಯ, ಹವಾಮಾನ - ಸ್ಥಿತಿಸ್ಥಾಪಕ ಮತ್ತು ಪೌಷ್ಟಿಕ ಬೀಜಗಳ ಫಲಾನುಭವಿಗಳಾಗಿದ್ದೇವೆ. ಇದರ ಪರಿಣಾಮವಾಗಿ ಇಂದು ಭಾರತೀಯರು ಸಸ್ಯಗಳು ಮತ್ತು ಆಹಾರಗಳ ಅತಿದೊಡ್ಡ ವೈವಿಧ್ಯತೆ ಹೊಂದಿದ್ದಾರೆ. ಭಾರತದಲ್ಲಿ ಮಾತ್ರ 200,000 ಕ್ಕೂ ಹೆಚ್ಚು ಬಗೆಯ ಅಕ್ಕಿ ಇದೆ.
ಬಾರ್ಲಿಯಿಂದ ರಾಗಿವರೆಗೆ, ನಮಗೆ ಆರೋಗ್ಯವನ್ನು ದಯಪಾಲಿಸುವ ಪವಿತ್ರ ಆಚರಣೆಗಳೊಂದಿಗೆ ನಾವು ಬೀಜಗಳನ್ನು ಗೌರವಿಸುತ್ತ ಬಂದಿದ್ದೇವೆ. ನವರಾತ್ರಿ ಸಮಯದಲ್ಲಿ ನಾವು ಒಂಬತ್ತು ದೇವತೆಗಳನ್ನು ಪೂಜಿಸುತ್ತೇವೆ ಮತ್ತು ಪ್ರತಿ ದೇವತೆಗೂ ಒಂದೊಂದು ಪವಿತ್ರ ಬೀಜವನ್ನು ಅರ್ಪಿಸುತ್ತೇವೆ. ಹುಟ್ಟಿನಿಂದ ಸಾವಿನತನಕ ನಮ್ಮ ಜೀವ ವೈವಿದ್ಯತೆಯನ್ನು ನಮ್ಮ ಆಚರಣೆಗಳಲ್ಲಿ ಸಂರಕ್ಷಿಸಿಡಲಾಗಿದೆ. ಭಾರತದಲ್ಲಿ ಈಗಲೂ ಹಲವು ಸಮುದಾಯಗಳಲ್ಲಿ ವಧುವು ತನ್ನ ಗಂಡನ ಮನೆಗೆ ತವರಿಂದ ಉಡುಗೊರೆಯಾಗಿ ಹಲವು ಬೀಜಗಳು ಮತ್ತು ಅರಿಶಿನ ಮುಂತಾದ ಪವಿತ್ರ ಮಸಾಲೆ ಪದಾರ್ಥಗಳನ್ನ ಕೊಂಡೊಯ್ಯುವ ವಾಡಿಕೆ ಇದೆ. ವಾಸ್ತವಾಗಿ, ಕಬ್ಬನ್ನ ಸಂಸ್ಕೃತದಲ್ಲಿ `ಇಕ್ಷು' ಎಂದು ಕರೆಯಲಾಗುತ್ತೆ. ನಮ್ಮ ಪುರಾಣ ಪ್ರಸಿದ್ಧ ಮಹಾರಾಜ್ ಶ್ರೀರಾಮಚಂದ್ರನದ್ದು ಇಕ್ಷಾಕು ವಂಶದವನು ಎಂತಹ ಕಾಕತಾಳೀಯವಲ್ಲವೇ? ನಮ್ಮ ಆಹಾರ ಪದಾರ್ಥಗಳು ನಮ್ಮ ಪರಂಪರೆಗೆ ಅವಿನಾಭಾವ ಸಂಬಂಧವಿರುವುದು ಇದರಲ್ಲಿ ತಿಳಿದುಬರುತ್ತದೆ.
ಪ್ರಾಣಿ ಸಂಕುಲವನ್ನು ಸಹ ನಾವು ದೂರ ಇಟ್ಟಿಲ್ಲ, ನಾವು ಅವುಗಳನ್ನ ನಮ್ಮ ಸಹಚರರು ಎಂದು ಪರಿಗಣಿಸಿರುತ್ತೇವೆ ಅಥವಾ ದೇವರು ಮತ್ತು ದೇವತೆಗಳ ಪ್ರತಿರೂಪ ಎಂದು ಪವಿತ್ರ ಭಾವನೆಯಿಂದ ನೋಡುತ್ತೇವೆ. ಪಾಶ್ಚಿಮಾತ್ಯರು ಅತಿ ಹೆಚ್ಚು ದ್ವೇಷಿಸುವ ಇಲಿ ಸಹ ಗಣೇಶನ ಜೊತೆ ಸಂಬಂಧವಿದೆ. ಉಪಖಂಡದ ನಾಗರಿಕತೆ, ಮಾನವಕೇಂದ್ರೀಯ ಸಂಕುಚಿತ ದೃಷ್ಟಿಯನ್ನ ಮೀರಿಬೆಳೆದಿದ್ದು, ಪ್ರತಿಯೊಂದೂ ಜೀವಿಯು ಪವಿತ್ರವೆಂದು ಮೌಲ್ಯೀಕರಿಸಿದ್ದು, ಅವೆಲ್ಲವೂ ನಮ್ಮ ಬೃಹತ್ ಜೀವನಚಕ್ರಕ್ಕೆ ಕೊಡುಗೆಯನ್ನು ನೀಡಿತು. ದುಃಖದ ಸಂಗತಿ ಎಂದರೆ, ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಿಗೆ ಇವು ಕೇವಲ “ಪೇಗನ್ ಆಚರಣೆಗಳು ಅಥವಾ ಮೂಢನಂಬಿಕೆಗಳಾಗಿದ್ದವು.
ಹೀಗಾಗಿ, ನಮ್ಮ ಬೀಜಗಳ ಹೆಸರಿನಲ್ಲಿ ರಾಹಯಕರವಾಗಿದೆ ಎಂದು ಭಾವಿಸಿದ ಅವರು ನಮ್ಮ ಬೀಜಗಳಿಗೆ ಧಾರ್ಮ ನಿಂದನೆಯಾಗುವ ರೀತಿ ಮರುನಾಮಕರಣ ಮಾಡುತ್ತಾರೆ - Pigeon Pea, Cow pea, Horse gram , ಇತ್ಯಾದಿ. ಪ್ರಬಲ ಸರಕು ಸಾಗಣೆ ಹಡಗು ಮತ್ತು ಬಂಗಾರದ ದಾಹದಿಂದ ಒಂದು ವ್ಯಾಪಾರಿ ಪಡೆಯನ್ನೇ ಹುಟ್ಟುಹಾಕಿದರು. ಅವರು ನಮ್ಮ ಪ್ರಾಚೀನ ಜೀವನಕ್ರಮವನ್ನೇ ತಿರುಗ ಮುರುಗ ಮಾಡುವತ್ತ ಗಮನ ಕೇಂದ್ರೀಕರಿಸಿದ್ದರು. ವೈರಸ್ ರೀತಿ ನಮಗೆ ಅಂಟಿಕೊಂಡರು. ಪ್ರಕೃತಿ ಮೇಲೆ ಆಕ್ರಮಣ, ಸಾಮ್ರಾಜ್ಯಶಾಹಿ ಮನೋಭಾವದಿಂದ ಸ್ವರ್ಗದಂತಿದ್ದ ದೇಶವನ್ನ ಕೊಳ್ಳೆ ಹೊಡೆದು ನರಕವನ್ನಾಗಿಸಿದರು.
ಆದರೆ, ಪ್ರಕೃತಿ ಮೇಲಿನ ಆಕ್ರಮಣ ಅಷ್ಟಕ್ಕೇ ನಿಂತಿತೇ? ಇಲ್ಲ, ಬೇರೊಂದು ರೂಪ ಪಡೆದುಕೊಂಡಿತು. ಈಸ್ಟ್ ಇಂಡಿಯಾ ಕಂಪನಿ ಬದಲಿಗೆ ನಮ್ಮಲ್ಲಿ ರಾಕ್ಷಸಿ ಅಗ್ರಿ ಜಿಯಾಂಟ್ಸ್ ಕಂಪನಿಗಳು ಪ್ರಕೃತಿ ಮತ್ತು ಜೈವಿಕ ಲೂಟಿ ಮಾಡಿಕೊಂಡಿವೆ. ಸಮೃದ್ಧಿ ಮತ್ತು ವೈವಿಧ್ಯತೆಯ ಭೂಮಿಯಾದ ಭಾರತವು ತನ್ನ ನಿಜವಾದ ಸಂಪತ್ತನ್ನು ಕಳೆದುಕೊಳ್ಳುತ್ತಿದೆ - ನಮ್ಮ ಜೀವವೈವಿಧ್ಯತೆ, ನಮ್ಮ ಬೀಜಗಳು, ನಮ್ಮ ಔಷಧಿ ಸಸ್ಯಗಳು ಮತ್ತು ನಮ್ಮ ಪ್ರಾಣಿಗಳ ಅನುವಂಶಿಕ ವೈವಿದ್ಯತೆ ಕಳೆದುಹೋಗುತ್ತಿದೆ.
ಆದರೆ ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಆತಂಕವಿದೆ. ವಿಶ್ವದಲ್ಲೇ ಅತಿ ಹೆಚ್ಚು ಇರುವ ಭಾರತೀಯ ಸಸ್ಯ ಆನುವಂಶಿಕ ಸಂಪನ್ಮೂಲಗಳನ್ನು (ಪಿಜಿಆರ್) ವಿದೇಶದಲ್ಲಿ ದರೋಡೆ ಮಾಡಲಾಗುತ್ತಿದೆ. ಅಕ್ರಮವಾಗಿ ಮಾತ್ತು ಆಡಳಿತ ಜಾರಿ ನ್ಯೂನ್ಯತೆಗಳಿಂದಾಗಿ ಈ ದಾಳಿ ನಡೆಯುತ್ತಿದೆ. ವಿದೇಶಿ ಕಂಪನಿಗಳ ಹೊಡೆತದಿಂದ ನಮ್ಮ ಮೂಲ ಸಸ್ಯರಾಶಿ ಲೂಟಿಯಾಗುತ್ತಿದೆ.
ಐಟಿಪಿಜಿಆರ್‌ಎಫ್‌ಎ ಮತ್ತು ಯುಪಿಒವಿಯಂತಹ ಒಪ್ಪಂದಗಳು ನಮ್ಮ ಎಲ್ಲ ಪಿಜಿಆರ್ ಅಂತಹ ಒಪ್ಪಂದಗಳು ಈ ಸಸ್ಯ ಮತ್ತು ಬೀಜಗಳ ಪೋಷಣೆಯಲ್ಲಿ ಸಹ ಪಾತ್ರವಹಿಸಿದ ಸಮುದಾಯಕ್ಕೆ ಕಡಿಮೆ ಆದಾಯ ಮತ್ತು ಸವಲತ್ತು ನೀಡಿ ಕಾರ್ಪೊರೇಟ್ ಶೋಷಣೆಗೆ ಶರಣಾಗುವಂತೆ ಭಾರತದ ಮೇಲೆ ಬೆದರಿಕೆ ಹಾಕುತ್ತಿವೆ. ಈ ಒಪ್ಪಂದಗಳಲ್ಲಿ ನಮ್ಮ ಜೀವವೈವಿಧ್ಯ ಕಾಯ್ದೆಯನ್ನು ಮಟ್ಟಹಾಕುವ ಮತ್ತು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವನ್ನು ದುರ್ಬಲಗೊಳಿಸುವ ಪ್ರಯತ್ನವೂ ಇದೆ.