ಕರ್ನಾಟಕ

karnataka

ETV Bharat / bharat

ಇಂದು ವಿಶ್ವ ಜೇನುನೊಣ ದಿನ... 'ಮನಿ' ಮಾಡಲು ನೆರವಾಗುತ್ತಿವೆ 'ಹನಿ ಬೀ' ಗಳು! - ಜೇನು ಸಾಕಣೆ

ಪರಿಸರದಲ್ಲಿ ಜೇನುನೊಣಗಳ ಪ್ರಾಮುಖ್ಯತೆಯ ಕುರಿತು ಜಾಗೃತಿ ಮೂಡಿಸಲು ಮೇ 20ರಂದು 'ವಿಶ್ವ ಜೇನುನೊಣ ದಿನ' ಆಚರಿಸಲು ಯುಎನ್ ನಿರ್ಧರಿಸಿತ್ತು. ಭಾರತದಲ್ಲಿಯೂ ಪ್ರತಿವರ್ಷ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುಲಾಗುತ್ತದೆ.

bee
bee

By

Published : May 20, 2020, 2:17 PM IST

ಹೈದರಾಬಾದ್: ಪರಿಸರದಲ್ಲಿ ಜೇನುನೊಣಗಳ ಪ್ರಾಮುಖ್ಯತೆ, ಸುಸ್ಥಿರ ಅಭಿವೃದ್ಧಿಗೆ ಜೇನುನೊಣಗಳ ಕೊಡುಗೆಗಳು ಹಾಗೂ ಅವುಗಳಿಗಾಗುತ್ತಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಮೇ 20ರಂದು 'ವಿಶ್ವ ಜೇನುನೊಣ ದಿನ' ಆಚರಿಸಲು ವಿಶ್ವಸಂಸ್ಥೆ ನಿರ್ಧರಿಸಿತ್ತು.

ನಾವು ಜೇನುನೊಣಗಳಿಗೆ ಅವಲಂಬಿತರಾಗಿದ್ದೇವೆ. ಜೇನುನೊಣಗಳು ಪರಾಗಸ್ಪರ್ಶದ ಮೂಲಕ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಜೇನುತುಪ್ಪ ಮತ್ತು ಇತರ ಜೇನಿನ ಉತ್ಪನ್ನಗಳು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಮತ್ತು ಆದಾಯ ಒದಗಿಸುತ್ತದೆ. ಕೃಷಿ ಹಾಗೂ ತೋಟಗಾರಿಕೆಯ ಅಭಿವೃದ್ಧಿಯಲ್ಲಿ ಜೇನು ಸಾಕಣಿಕೆ 5ನೇ ಸ್ಥಾನದಲ್ಲಿದೆ.

ಜೇನುಸಾಕಣೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಗ್ರಾಮೀಣ ಪ್ರದೇಶದ ರೈತರು ಜೇನು ಸಾಕಣೆ ಚಟುವಟಿಕೆಯನ್ನು ನಡೆಸಲು ಹಾಗೂ ದೇಶದಲ್ಲಿ ವೈಜ್ಞಾನಿಕ ಜೇನುಸಾಕಣೆಯ ಅಭಿವೃದ್ಧಿಗಾಗಿ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ ಅಡಿಯಲ್ಲಿ ಜೇನುಸಾಕಣಿಕೆಗೆ ಪ್ರೋತ್ಸಾಹ ನಿಡುವ ಘಟಕವೊಂದನ್ನು ತೆರೆಯಲಾಗಿದೆ.

ದೇಶದಲ್ಲಿ 'ಸಿಹಿ ಕ್ರಾಂತಿಯ' ಗುರಿ ಸಾಧಿಸಲು ವೈಜ್ಞಾನಿಕ ಜೇನುಸಾಕಣೆಯ ಪ್ರಚಾರ ಮತ್ತು ಅಭಿವೃದ್ಧಿಗಾಗಿ 'ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿ ಮಿಷನ್ (ಎನ್‌ಬಿಎಚ್‌ಎಂ)' ಎಂಬ ಹೊಸ ಯೋಜನೆಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ. ಇದರ ಮೂಲಕ ಜೇನು ಸಾಕಣಿಕೆ ತರಬೇತಿ, ಜೇನು ಉತ್ಪಾದನೆಗೆ ಬೆಂಬಲ, ಜೇನುಸಾಕಣೆ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಜೇನು ಸಂಸ್ಕರಣೆಗೆ ಸಹಾಯ, ಮಾರುಕಟ್ಟೆ ಬೆಂಬಲ, ವ್ಯಾಪಾರದಲ್ಲಿ ಸಹಾಯ, ಜೇನು ಪರೀಕ್ಷಾ ಪ್ರಯೋಗಾಲಯಗಳು, ಜೇನುನೊಣಗಳ ಕಾಯಿಲೆಗೆ ಸಂಬಂಧಿಸಿದ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ವಿಶ್ವ ಜೇನುನೊಣ ದಿನವಾದ ಮೇ 20ರಂದು ಪ್ರತಿವರ್ಷ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜೇನುನೊಣ ದಿನವನ್ನು ಆಚರಿಸಲು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಹಾಗೂ ಸರ್ಕಾರ ನಿರ್ಧರಿಸಿದೆ.

'ಜೇನುನೊಣಗಳನ್ನು ಉಳಿಸಿ' ಕಾರ್ಯಕ್ರಮದ ಮೂಲಕ ಸಮಾವೇಶಗಳು, ಸೆಮಿನಾರ್​ಗಳು, ಜೇನು ಉತ್ಸವಗಳು, ಪ್ರದರ್ಶನಗಳು, ಕೃಷಿ ಹಾಗೂ ತೋಟಗಾರಿಕೆಯಲ್ಲಿ ಜೇನುನೊಣಗಳ ಪ್ರಾಮುಖ್ಯತೆಯ ಕುರಿತು ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಪತ್ರಿಕೆಗಳ ಮೂಲಕ ಪ್ರಚಾರ, ಜೇನುತುಪ್ಪದ ಬಳಕೆ ಕುರಿತು ಪುಸ್ತಕಗಳನ್ನು ಪ್ರಕಟಿಸುವುದು ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.

ABOUT THE AUTHOR

...view details