ಓನಮ್ ಬೆಂಬೆಮ್ ದೇವಿ. 1980 ರ ಏಪ್ರಿಲ್ 4ರಂದು ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಜನಿಸಿದ ಭಾರತೀಯ ಫುಟ್ಬಾಲ್ ಆಟಗಾರ್ತಿ. ಭಾರತೀಯ ಮಹಿಳಾ ಲೀಗ್‌ನಲ್ಲಿ ಮೊದಲ ಮಹಿಳಾ ವ್ಯವಸ್ಥಾಪಕರಾಗಿ ನೇಮಕಗೊಂಡ ಇವರು, ಪ್ರಸ್ತುತ ಮಹಿಳೆಯರ ಫುಟ್ಬಾಲ್ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ.
1988 ರಲ್ಲಿ ಫುಟ್ಬಾಲ್ ಲೋಕಕ್ಕೆ ಕಾಲಿಟ್ಟ ಬೆಂಬೆಮ್ ದೇವಿ, 1991 ರಲ್ಲಿ ಅಂದ್ರೆ ತಮ್ಮ 11 ನೇ ವಯಸ್ಸಿನಲ್ಲಿ 13 ವರ್ಷದೊಳಗಿನ ಸಬ್ ಜೂನಿಯರ್ನಲ್ಲಿ ಪಂದ್ಯದಲ್ಲಿ ಮಣಿಪುರವನ್ನು ಪ್ರತಿನಿಧಿಸಿದ್ರು. 1993 ರಲ್ಲಿ ಮಣಿಪುರ ಮಹಿಳಾ ಫುಟ್ಬಾಲ್ ರಾಜ್ಯ ತಂಡಕ್ಕೆ ಸೇರಿದ್ದ ದೇವಿ, 13ನೇ ವಯಸ್ಸಿನಲ್ಲಿ 32ನೇ ರಾಷ್ಟ್ರೀಯ ಫುಟ್ಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಬಳಿಕ ಆಂಧ್ರಪ್ರದೇಶ ತಂಡದ ನಾಯಕಿರಾಗಿ ನೇಮಕಗೊಂಡಿದ್ದರು.
1995ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಬೆಂಬೆಮ್ ಏಷ್ಯನ್ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಂಡರು. ಈ ಮೂಲಕ ಗುವಾಮ್ ವಿರುದ್ಧದ ಪಂದ್ಯವೊಂದರಲ್ಲಿ ಅಂತಾರಾಷ್ಟ್ರೀಯ ಪಂದ್ಯಾಟಕ್ಕೆ ಚೊಚ್ಚಲ ಪ್ರವೇಶ ಮಾಡಿದರು.
ಓನಮ್ ಬೆಂಬೆಮ್ ದೇವಿ ಸಾಧನೆಯ ಪಟ್ಟಿ: