ಹಾರ್ಡೋಯಿ: ಬಯಲು ಶೌಚ ಮುಕ್ತ ಮಾಡಲು ಸರ್ಕಾರ ತಲೆಕೆಳಗಾಗಿ ನಿಂತಿದೆ ಆದರೆ, ಇಲ್ಲೊಂದು ಗ್ರಾಮದ ಸ್ಥಿತಿ ಮಾತ್ರ ತುಂಬಾ ಶೋಚನೀಯ. ಕಳೆದ ನಾಲ್ಕು ವರ್ಷಗಳಿಂದ ನೂರಾರು ಮಹಿಳೆಯರು ಹಗಲಿನ ವೇಳೆಯಲ್ಲಿ ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಲು ರಾತ್ರಿ ಊಟವನ್ನೇ ಮಾಡುತ್ತಿಲ್ಲವಂತೆ.
ಮಲ ವಿಸರ್ಜನೆ ತಡೆಯಲು ರಾತ್ರಿ ಊಟವನ್ನೇ ಬಿಟ್ಟ ಈ ಊರಿನ ಮಹಿಳೆಯರು... ಇವರ ಸ್ಥಿತಿ 'ಶೌಚನೀಯ'!! - Women miss lunch to avoid going to toilet in day time
ಕಳೆದ ನಾಲ್ಕು ವರ್ಷಗಳಿಂದ ನೂರಾರು ಮಹಿಳೆಯರು ಹಗಲಿನ ವೇಳೆಯಲ್ಲಿ ಶೌಚಕ್ಕೆ ಹೋಗುವುದನ್ನು ತಪ್ಪಿಸಲು ರಾತ್ರಿ ಊಟವನ್ನೇ ಮಾಡುತ್ತಿಲ್ಲವಂತೆ. ಅದೆಷ್ಟೋ ಬಾರಿ ಶೌಚಾಲಯ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರೂ ಸ್ಥಳೀಯ ಆಡಳಿತ ಇದಕ್ಕೆ ಯಾವುದೇ ಸ್ಪಂದನೆ ನೀಡುತ್ತಿಲ್ಲವಂತೆ.
ಹೌದು, ನಂಬಲು ಅಸಾಧ್ಯ ಆದರೂ ಸತ್ಯ. ಪ್ರಣಬಹರ್ ಗ್ರಾಮಸಭೆಯ ಮೂರು ಗ್ರಾಮಗಳ ಮಹಿಳೆಯರು ಈ ರೀತಿ ಮಾಡುತ್ತಿದ್ದಾರೆ. ನಾಗರಿಕತೆ ಎಷ್ಟೇ ಎತ್ತರಕ್ಕೆ ಬೆಳದರೂ ಎಲ್ಲರೂ ತಲೆ ಬಾಗುವಂತಹ ಘಟನೆ ಇದಾಗಿದೆ. ಹಳ್ಳಿಗಳಲ್ಲಿ ಶೌಚಾಲಯ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾ ಅಧಿಕಾರಿಗಳ ಉದಾಸೀನತೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಕಾರಣಕ್ಕೆ 500 ಕ್ಕೂ ಹೆಚ್ಚು ಮಹಿಳೆಯರು ತಮ್ಮ ಊಟವನ್ನು ತ್ಯಜಿಸಿದ್ದಾರೆ. ಈ ಬಗ್ಗೆ ಇಲ್ಲಿನವರು ಸ್ಥಳೀಯ ಆಡಳಿತಕ್ಕೆ ಅದೆಷ್ಟೋ ಮನವಿ ಮಾಡಿದರೂ ಇವರ ಕೂಗು ಇನ್ನೂ ಕೇಳಿಸಿಲ್ಲವಂತೆ.
ಗ್ರಾಮದ ಅಂಗವಿಕಲರು, ವೃದ್ಧರು ಮತ್ತು ಯುವತಿಯರು ಮೂಲಭೂತ ಸೌಕರ್ಯವನ್ನು ಕೋರಿ ಈಗ ಊಟವನ್ನು ತಪ್ಪಿಸುತ್ತಿದ್ದಾರಂತೆ. ಹಳ್ಳಿಗಳ ಎಲ್ಲಾ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವವರೆಗೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಇಲ್ಲಿನ ಮಹಿಳೆಯರು ಹೇಳುತ್ತಿದ್ದಾರೆ. ಇದರ ನಡುವೆ, ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವರಿಗೆ ಸೌಲಭ್ಯ ಅಗತ್ಯವಿದ್ದರೆ, ಶೀಘ್ರದಲ್ಲೇ ಅದನ್ನು ಒದಗಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.