ಭೋಪಾಲ್:ಬೆಂಗಳೂರಿನಲ್ಲಿ ವಾಸವಿರುವ ವ್ಯಕ್ತಿಯೋರ್ವ ಜುಲೈ 31 ರಂದು ಮೊಬೈಲ್ನಲ್ಲೇ ಹೆಂಡತಿಗೆ ತಲಾಖ್ ನೀಡಿದ್ದು, ಇದರಿಂದ ಕಂಗೆಟ್ಟ ಮಹಿಳೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಪ್ರಕರಣದ ಮಾಹಿತಿ ನೀಡಿದಳು.
ಮೊಬೈಲ್ನಲ್ಲೇ ತಲಾಖ್ ನೀಡಿದ ಬೆಂಗಳೂರು ವ್ಯಕ್ತಿ.. ಮಧ್ಯಪ್ರದೇಶ ಸಿಎಂ ಭೇಟಿಯಾದ ಮಹಿಳೆ!
ಬೆಂಗಳೂರಿನಲ್ಲಿ ವಾಸವಾಗಿರುವ ವ್ಯಕ್ತಿಯೋರ್ವ ಮೊಬೈಲ್ನಲ್ಲೇ ಹೆಂಡತಿಗೆ ತಲಾಖ್ ನೀಡಿದ್ದು, ಇದರಿಂದ ಮನನೊಂದ ಮಹಿಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ.
ಸಿಂಗಾಪುರ ನಾಗರಿಕತ್ವ ಹೊಂದಿರುವ ಹೆಂಡತಿ, ಗಂಡ ಹಾಗೂ ಮಕ್ಕಳು ಸದ್ಯ ಮಧ್ಯಪ್ರದೇಶದಲ್ಲಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ತೆರಳಿದ್ದ ಪತಿ ಇಮಾಮ್ ಖುರೇಷಿ ಅಲ್ಲಿಂದಲೇ ಪತ್ನಿಗೆ ತಲಾಖ್ ನೀಡಿದ್ದಾನೆ. ಇದರ ಬೆನ್ನಲ್ಲೇ ಮಹಿಳೆ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಳು.
ಇದೀಗ ಮಧ್ಯಪ್ರದೇಶ ಮುಖ್ಯಮಂತ್ರಿ ಭೇಟಿ ಮಾಡಿ ತನಗೆ ಆಗಿರುವ ತೊಂದರೆ ಹೇಳಿಕೊಂಡಿದ್ದಾಳೆ. ಮುಖ್ಯಮಂತ್ರಿಗಳು ಸಹಾಯ ಮಾಡುವ ಭರವಸೆ ನೀಡಿದ್ದಾಗಿ ಮಹಿಳೆ ತಿಳಿಸಿದ್ದಾಳೆ. ಇದೇ ವಿಷಯವಾಗಿ ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಘಟನೆಗೆ ಸಂಬಂಧಿಸಿದಂತೆ ನಾನು ಈಗಾಗಲೇ ಮಧ್ಯಪ್ರದೇಶ ಡಿಜಿಪಿ ಜತೆ ಮಾತನಾಡಿದ್ದು, ಬೆಂಗಳೂರು ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.