ಹೈದರಾಬಾದ್: ವೈದ್ಯೆ ಅತ್ಯಾಚಾರ ನಡೆದ ಸ್ಥಳದ ಕೊಂಚ ದೂರದಿಂದ ಮಹಿಳೆಯೊಬ್ಬಳು ಕಿಡ್ನ್ಯಾಪ್ ಆಗಿದ್ದು, ಮುತ್ತಿನ ನಗರಿ ಬೆಚ್ಚಿಬಿದ್ದಿದೆ.
ವೈದ್ಯೆ ಮೇಲೆ ಅತ್ಯಾಚಾರ ನಡೆದ ಕೊಂಚ ದೂರದಲ್ಲಿ ಮಹಿಳೆ ಕಿಡ್ನಾಪ್... ಮತ್ತೆ ಬೆಚ್ಚಿಬಿದ್ದ ಮುತ್ತಿನನಗರಿ! - ಹೈದರಾಬಾದ್ ಮಹಿಳೆ ಅಪಹರಣ ಸುದ್ದಿ
ಮುತ್ತಿನ ನಗರಿ ಹೈದರಾಬಾದ್ನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಅತ್ಯಾಚಾರ, ಕಿಡ್ನ್ಯಾಪ್ನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಮಹಿಳೆಯೊಬ್ಬಳು ಅಪಹರಣವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೌದು, ತೆಲಂಗಾಣದ ಹೈದರಾಬಾದ್ನ ಶಂಷಾಬಾದ್ ನಗರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಕಿರಾತಕರು ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಸುಟ್ಟು ಹಾಕಿದ್ದರು. ಅದಾದ ಬಳಿಕ ವೈದ್ಯೆ ಮೃತದೇಹ ದೊರೆತ ಸ್ಥಳದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ನಗ್ನವಾಗಿರುವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈಗ ಶಂಷಾಬಾದ್ನ ಸಮೀಪದ ಆರಂಗಢ್ ರಿಂಗ್ ರೋಡ್ ಬಳಿ ಮಹಿಳೆಯೊಬ್ಬಳ ಅಪಹರಣವಾಗಿದೆ.
ಹೌದು, ಮಹಿಳೆಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಎಳೆದೊಯ್ಯುತ್ತಿರುವುದು ಸ್ಥಳೀಯರು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ರಾಜೇಂದ್ರನಗರ್, ಮೈಲಾರ್ದೇವ್ಪಲ್ಲಿ ನಗರದ ಪೊಲೀಸರು ತನಿಖೆ ಕೈಗೊಂಡು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪಹರಣಗೊಂಡ ಮಹಿಳೆ ಬಗ್ಗೆ ಮಾಹಿತಿ ತಿಳಿದು ಬರಬೇಕಾಗಿದೆ.