ಘಾಜಿಯಾಬಾದ್(ಉತ್ತರಪ್ರದೇಶ): ಮಹಿಳಾ ಐಎಎಸ್ ಅಧಿಕಾರಿ ಹಾಗೂ ಆಕೆಯ ಸಹೋದರಿ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಮಹಿಳಾ ಐಎಎಸ್ ಅಧಿಕಾರಿ, ಆಕೆಯ ಸಹೋದರಿ ಮೇಲೆ ಮಾರಣಾಂತಿಕ ಹಲ್ಲೆ! - ಘಾಜಿಯಾಬಾದ್
ಮಹಿಳಾ ಐಎಎಸ್ ಅಧಿಕಾರಿ ಹಾಗೂ ಆಕೆಯ ಸಹೋದರಿ ಮೇಲೆ ದುಷ್ಕರ್ಮಿವೋರ್ವ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಎರಡು ದಿನದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಘಾಜಿಯಾಬಾದ್ನ ಘಾಂಟಾ ಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅವರ ನಿವಾಸದ ಮುಂಭಾಗದಲ್ಲೇ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರಾಣಿ ಕೂಡ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೇ.30ರಂದು ರಾತ್ರಿ 9-10 ಗಂಟೆ ನಡುವೆ ಈ ಘಟನೆ ನಡೆದಿದ್ದು, ನಾನು ನನ್ನ ಸಹೋದರಿ ರೀಮಾ ಮನೆಯ ಹೊರಗಡೆ ನಿಂತುಕೊಂಡಿದ್ದ ವೇಳೆ ಏಕಾಏಕಾಯಾಗಿ ಬಂದ ವ್ಯಕ್ತಿಯೋರ್ವ ಕಬ್ಬಿಣದ ರಾಡ್ನಿಂದ ನನ್ನ ತಲೆಗೆ ಹೊಡೆಯಲು ಯತ್ನಿಸಿದನು. ಈ ವೇಳೆ ನಾನು ತಪ್ಪಿಸಿಕೊಂಡಿದ್ದು, ತದನಂತರ ನನ್ನ ಸಹೋದರಿ ಮೇಲೆ ಹಲ್ಲೆ ಮಾಡಿ ಆಕೆಯ ಕಾಲಿಗೆ ಗಾಯ ಮಾಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಆಕೆಗೆ ನಡೆಯಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.