ನವದೆಹಲಿ:ಆರ್ಟಿಕಲ್ 370 ರದ್ದಾಗಿ ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರು ಮಹತ್ತರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಡಾ. ಸೈಯದ್ ಸೆಹ್ರಿಶ್ ಅಸ್ಗರ್ ಹಾಗೂ ಪಿ ಕೆ ನಿತ್ಯಾ, ಕಣಿವೆ ನಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಏಕೈಕ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು.
ಡಾ. ಸೈಯದ್ ಸೆಹ್ರಿಶ್ ಅಸ್ಗರ್- ಐಎಎಸ್ ಆಫೀಸರ್
ಡಾ.ಸೈಯದ್ ಸೆಹ್ರಿಶ್ ಅಸ್ಗರ್, 2013ರನೇ ಬ್ಯಾಚ್ನ ಐಎಎಸ್ ಆಫೀಸರ್. ಸದ್ಯ ಶ್ರೀನಗರದಲ್ಲಿ ಜಮ್ಮು-ಕಾಶ್ಮೀರದ ಮಾಹಿತಿ ನಿರ್ದೇಶಕಿಯಾಗಿ ಆಯ್ಕೆಯಾಗಿರುವ ಇವರು, ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹೊಸ ಕರ್ತವ್ಯದ ಬಗ್ಗೆ ಹೆಮ್ಮೆ ಪಡುವ ಸೈಯದ್ ಸೆಹ್ರಿಶ್ ಅಸ್ಗರ್, ಕಣಿವೆ ರಾಜ್ಯದ ಜನರನ್ನು ಅಲ್ಲಿನ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಮಾಡುತ್ತಾರೆ. ಈ ಮೂಲಕ ನೂರಾರು ಕಿಲೋ ಮೀಟರ್ ದೂರದಲ್ಲಿರುವ ಜನರೊಡನೆ ಅಸ್ಗರ್, ಕಾಶ್ಮೀರದ ವೈದ್ಯರು ಹಾಗೂ ಜನರೊಂದಿಗೆ ಕೊಂಡಿಯಾಗಿ ಅಸ್ಗರ್ ಕೆಲಸ ಮಾಡುತ್ತಿದ್ದಾರೆ.
ಆದರೆ, ಕಳೆದ ಎಂಟು ದಿನಗಳಿಂದ ಜನರ ಕುಂದು-ಕೊರತೆಗಳನ್ನು ಪರಿಹರಿಸುವಲ್ಲಿ ಅಸ್ಗರ್ ಪ್ರಮುಖ ಪಾತ್ರವಹಿಸಿದ್ದಾರೆ. 370ನೇ ವಿಧಿ ರದ್ದಾದ ಬಳಿಕ ಅಲ್ಲಿನ ಬಿಕ್ಕಟ್ಟು ನಿರ್ವಹಣೆಯನ್ನು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮೂಲ ಅಸ್ಗರ್ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಐಪಿಎಸ್ ಅಧಿಕಾರಿ- ಪಿ ಕೆ ನಿತ್ಯಾ
ಪಿ ಕೆ ನಿತ್ಯಾ, ಶ್ರೀನಗರದ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದ ಮತ್ತೊಬ್ಬ ಪ್ರಮುಖ ಮಹಿಳಾ ಅಧಿಕಾರಿ. ಕಾಶ್ಮೀರದ ರಾಮ್ ಮುನ್ಸಿ ಬಾಗ್ ಮತ್ತು ಹರ್ವನ್ ದಾಗ್ಚಿ ಗ್ರಾಮದ ನಡುವಿನ ಮೇಲ್ವಿಚಾರಣೆಯ ಜವಾಬ್ದಾರಿ ಇವರ ಮೇಲಿದೆ. ಸುಮಾರು 40 ಕಿ.ಮೀ ವಿಸ್ತರಣೆಯು ಸೂಕ್ಷ್ಮ ಪ್ರದೇಶವಿದು. ಇಲ್ಲೇ ದಾಲ್ ಸರೋವರವಿದ್ದು, ರಾಜ್ಯಪಾಲರ ನಿವಾಸ ಹಾಗೂ ವಿಐಪಿಗಳನ್ನು ಬಂಧಿಸಿರುವ ಕಟ್ಟಡಗಳೂ ಇವೆ.
ಸದ್ಯ ಇವರಿಬ್ಬರೂ ಜಮ್ಮು ಮತ್ತು ಲಡಾಖ್ ಭಾಗದಲ್ಲಿ ನೇಮಕಗೊಂಡಿರುವ ಪ್ರಮುಖ ಮಹಿಳಾ ಅಧಿಕಾರಿಗಳು. ತಮ್ಮ ಕರ್ತವ್ಯದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಅಸ್ಗರ್, ಓರ್ವ ವೈದ್ಯೆಯಾಗಿ ನಾನು ರೋಗಿಗಳನ್ನ ನೋಡಿಕೊಳ್ಳುತ್ತಿದ್ದೆ. ಆದರೆ, ಇಂದು ಕಾಶ್ಮೀರದಲ್ಲಿ ನನಗಿರುವ ಸವಾಲು ವಿಭಿನ್ನವಾಗಿದೆ. ಈ ಸವಾಲು ತುಂಬಾ ಕಠಿಣ. ಅಲ್ಲದೆ ಇದಕ್ಕೆ ಭಾವನಾತ್ಮಕ ಬೆಂಬಲವೂ ಬೇಕು ಎಂದು ಎಂಬಿಬಿಎಸ್ ಓದಿ ವೈದ್ಯೆಯಾಗಿದ್ದೆ ಎಂದು ವರ್ಷದ ಮಗುವಿನ ತಾಯಿ ಅಸ್ಗರ್ ಹೇಳುತ್ತಾರೆ. ಅಸ್ಗರ್ ಅವರ ಪತಿ ತೀರಾ ಸೂಕ್ಷ್ಮ ಪ್ರದೇಶವಾದ ಪುಲ್ವಾಮಾ ಜಿಲ್ಲೆಯಲ್ಲಿ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನೊಂದೆಡೆ 28 ವರ್ಷ ವಯಸ್ಸಿನ ನಿತ್ಯಾ, ಛತ್ತೀಸ್ಗಢ ಮೂಲದವರು. ಇದು ನನ್ನ ಹಳೆಯ ಕೆಲಸವಾದ ಸಿಮೆಂಟ್ ಕಂಪನಿಯ ಮ್ಯಾನೇಜರ್ ಹುದ್ದೆಗಿಂತಲೂ ಹೆಚ್ಚು ಸವಾಲಿನದ್ದಾಗಿದೆ. ಕಾಶ್ಮೀರದ ಜನರ ಭದ್ರತೆ ಹಾಗೂ ರಕ್ಷಣೆಯ ಜೊತೆಗೆ ಇಲ್ಲಿನ ಪ್ರಮುಖ ವ್ಯಕ್ತಿಗಳ ಭದ್ರತೆಯನ್ನೂ ನೋಡಿಕೊಳ್ಳಬೇಕು. ನನಗೆ ಸವಾಲೆಂದರೆ ತುಂಬಾ ಅಚ್ಚುಮೆಚ್ಚು ಎಂದು ನಿತ್ಯಾ ಹೆಮ್ಮೆಯಿಂದ ಹೇಳುತ್ತಾರೆ.